ದಕ್ಷಿಣ ಆಫ್ರಿಕಾ- ಭಾರತದ ಆಟಗಾರರು 
ಕ್ರೀಡೆ

ಭಾರತ-ದ. ಆಫ್ರಿಕಾ ಪಂದ್ಯದ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಇದುವರೆಗೂ ದಕ್ಷಿಣ ಆಫ್ರಿಕಾವನ್ನು ಪರಾಭವಗೊಳಿಸಿಲ್ಲ. ನಾಳೆ ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ...

ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಇದುವರೆಗೂ ದಕ್ಷಿಣ ಆಫ್ರಿಕಾವನ್ನು ಪರಾಭವಗೊಳಿಸಿಲ್ಲ. ನಾಳೆ ನಡೆಯಲಿರುವ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಭಾರತ ಇತಿಹಾಸ ಸೃಷ್ಟಿಸಲಿದೆಯೆ? ಎಂಬುದನ್ನು ಕಾದು ನೋಡಬೇಕಾಗಿದೆ.

ನಾಳೆ ಬೆಳಗ್ಗೆ 9 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಇಲ್ಲಿಯವರೆಗೆ ಭಾರತ-ದ. ಆಫ್ರಿಕಾ ನಡುವಿನ ಪಂದ್ಯಗಳಲ್ಲಿ ವಿಶೇಷ ಏನಿತ್ತು? ನಾಳೆ ನಡೆಯಲಿರುವ ಪಂದ್ಯ ಯಾಕೆ ವಿಶೇಷವಾಗಿದೆ ಎಂಬುದರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು ಇಲ್ಲಿವೆ.

1. ಭಾರತ ಇದುವರೆಗೆ ಅಂದರೆ 1992, 1999, 2011 ರಲ್ಲಿ ನಡೆದ ವಿಶ್ವಕಪ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲವು ಸಾಧಿಸಿಲ್ಲ

2. ಇದೇ ಮೊದಲ ಬಾರಿ ಸಚಿನ್ ತೆಂಡೂಲ್ಕರ್ ಇಲ್ಲದೇ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ ಎದುರಿಸಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ 3 ವಿಶ್ವಕಪ್‌ಗಳಲ್ಲಿಯೂ ಆಡಿದ್ದರು.

3. ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ಏಕೈಕ ಭಾರತೀಯ ಆಟಗಾರ ಸಚಿನ್ ತೆಂಡೂಲ್ಕರ್. 2011ರಲ್ಲಿ ಸಚಿನ್ 111 ರನ್ ದಾಖಲಿಸಿದ್ದರು.

4. ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅತೀ ಹೆಚ್ಚು  ರನ್ ಗಳಿಸಿದ್ದು ಸಚಿನ್. 3 ಇನ್ನಿಂಗ್ಸ್‌ಗಳಲ್ಲಿ 153 ರನ್

5. ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕಾಗಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಖ್ಯಾತಿ ಹರ್ಭಜನ್ ಸಿಂಗ್‌ಗೆ. 2011ರಲ್ಲಿ 53 ರನ್‌ಗೆ 3 ವಿಕೆಟ್

6. ದಕ್ಷಿಣ ಆಫ್ರಿಕಾ ಪರವಾಗಿ ಜಾಕ್ವೆಸ್ ಕಾಲೀಸ್ ಅತೀ ಹೆಚ್ಚು ರನ್ ಗಳಿಸಿದ್ದಾರೆ. ಗಳಿಸಿದ ರನ್ 165

7. ವಿಶ್ವಕಪ್‌ನಲ್ಲಿ ಇದುವರೆಗೆ ದಕ್ಷಿಣ ಆಫ್ರಿಕಾದ ಯಾವುದೇ ಆಟಗಾರ ಶತಕ ಬಾರಿಸಿಲ್ಲ. 1999ರಲ್ಲಿ ಕಾಲೀಸ್ 96 ರನ್ ಬಾರಿಸಿದ್ದರು.

8. ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ 5 ವಿಕೆಟ್ ಕಬಳಿಸಿದ್ದರು. 2011ರ ವಿಶ್ವಕಪ್‌ನಲ್ಲಿ 50 ರನ್ ನೀಡಿ 5 ವಿಕೆಟ್ ಗಳಿಸಿದ್ದರು ಸ್ಟೇನ್.

9. 2011ರಲ್ಲಿ ಭಾರತದ ಕೋಚ್ ಆಗಿದ್ದ ದ.ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕ್ರಿಸ್ಟನ್ ಈಗ ದಕ್ಷಿಣ ಆಫ್ರಿಕಾದ ಸಲಹೆಗಾರ.

10. ದಕ್ಷಿಣ ಆಫ್ರಿಕಾ ವಿರುದ್ಧ ಅತೀ ಹೆಚ್ಚು ಸ್ಟ್ರೈ ಕ್ ರೇಟ್ ಹೊಂದಿರುವ ಆಟಗಾರ ಕಪಿಲ್ ದೇವ್. 1992 ರಲ್ಲಿ ಕಪಿಲ್ ದೇವ್ 29 ಬಾಲ್‌ಗಳಲ್ಲಿ 42 ರನ್ ಗಳಿಸಿ ( ಮೂರು ಬೌಂಡರಿ, 1 ಸಿಕ್ಸರ್) 144.82  ಸ್ಟ್ರೈ ಕ್ ರೇಟ್ ಹೊಂದಿದ್ದಾರೆ.


ಇಲ್ಲಿಯವರೆಗೆ ಭಾರತ- ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಪಂದ್ಯದ ಫಲಿತಾಂಶ

1992 -ದಕ್ಷಿಣ ಆಫ್ರಿಕಾ 6 ವಿಕೆಟ್‌ಗಳಿಂದ ಜಯ ಗಳಿಸಿತ್ತು
1999- ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳಿಂದ ಜಯ ಗಳಿಸಿತ್ತು
2011-ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳಿಂದ ಜಯ ಗಳಿಸಿತ್ತು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT