ಮೆಲ್ಬರ್ನ್: ಇಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಸೆಣಸಲಿರುವ ಭಾರತ ಟಾಸ್ ಗೆದಿದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಗೆಲವು ಮರೀಚಿಕೆಯಾಗಿಯೇ ಉಳಿದಿದೆ.
1992, 1999 ಮತ್ತು 2011 ಈ ಮೂರೂ ವಿಶ್ವಕಪ್‌ಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಿದ್ದ ಭಾರತಕ್ಕೆ ಸೋಲೇ ಗತಿಯಾಗಿತ್ತು. ಆದರೆ, ಈ ಬಾರಿಯ ವಿಶ್ವಕಪ್‌ನಲ್ಲಿ ಇತಿಹಾಸ ಬದಲಿಸುವುದೇ ಭಾರತ?
ಬಿ ಗುಂಪಿನ ತನ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸುಲಭ ಜಯಗಳಿಸಿ ಬಂದಿರುವ ಮಹೇಂದ್ರ ಸಿಂಗ್ ಧೋನಿ ಪಡೆಗೆ ಈ ಫಲಿತಾಂಶ ಹೆಚ್ಚು ಆತ್ಮವಿಶ್ವಾಸ ತುಂಬವಂತೆ ಮಾಡಿದೆ.
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ, ದಕ್ಷಿಣ ಆಫ್ರಿಕಾವನ್ನು ಮಣಿಸಿ ಇತಿಹಾಸ ಬರೆಯಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಹುಟ್ಟಲು ಕಾರಣವಾಗಿದೆ. ವಿಶ್ವಕಪ್‌ನಲ್ಲಿ ಈವರೆಗೂ ಹುಟ್ಟಲು ಕಾರಣವಾಗಿದೆ. ವಿಶ್ವಕಪ್‌ನಲ್ಲಿ ಈವರೆಗೂ ದಕ್ಷಿಣ ಆಫ್ರಿಕಾ ವಿರುದ್ಧ ಆಡಿರುವ ಮೂರೂ ಪಂದ್ಯಗಳಲ್ಲಿ ಭಾರತವೇ ಮೊದಲು ಬ್ಯಾಟ್ ಮಾಡಿತ್ತು.
ಹಾಗಾಗಿ, ಭಾನುವಾರ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದಿದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಕದನದಲ್ಲಿ ಯಾರು ಗೆಲ್ಲುತ್ತಾರೋ ಅವರೇ, ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಬಲ್ಲರು ಎಂಬ ಊಹೆ ಇದೆ. ಉಭಯ ಪಡೆಗಳ ವಿಶ್ಲೇಷಣೆ ಮಾಡಿದಲ್ಲಿ ಭಾರತದ ಯುವ ಪಡೆಯ ಮುಂದೆ ದಕ್ಷಿಣ ಆಫ್ರಿಕಾವೇ ಫೇವರಿಟ್ ಎನ್ನಲಾಗುತ್ತಿದೆ.