ಐರ್ಲೆಂಡ್, ಯುಎಇ 
ಕ್ರೀಡೆ

ಯುಎಇ ಬಗ್ಗೆ ಐರ್ಲೆಂಡ್ ಎಚ್ಚರದಿಂದಿರಲಿ

ಬ್ರಿಸ್ಬೇನ್: ಈ ಸಲದ ವಿಶ್ವಕಪ್‍ನಲ್ಲಿ ಡಾರ್ಕ್ ಹಾರ್ಸ್‍ಗಳಲ್ಲಿ ಒಂದಾಗಿರುವ ಐರ್ಲೆಂಡ್, ಹನ್ನೊಂದನೇ ಆವೃತ್ತಿಯಲ್ಲಿ ಭರ್ಜರಿ ಆರಂಭವನ್ನೇ ಪಡೆದಿದೆ. ಈ ಶುಭಾರಂಭವನ್ನು ಮತ್ತೆ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವ ಛಲದಲ್ಲಿರುವ ಐರ್ಲೆಂಡ್ ಆಟಗಾರರ ಎದುರು ಈಗ ದುರ್ಬಲ ಸವಾಲು ಒಂದು ಕಾದಿದೆ.

ಬ್ರಿಸ್ಬೇನ್‍ನಲ್ಲಿ ಬುಧವಾರ `ಎ' ಗುಂಪಿನ ಪಂದ್ಯದಲ್ಲಿ ಐರ್ಲೆಂಡ್, ಯುನೈಟೆಡ್ ಅರಬ್ ಎಮಿರೇಟ್ಸ್‍ನ್ನು (ಯುಎಇ) ಎದುರಿಸಲಿದೆ. ನೆಲ್ಸನ್‍ನಲ್ಲಿ ಆಡಲಾದ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ 4 ವಿಕೆಟ್‍ಗಳಿಂದ ಜಯಭೇರಿ ಬಾರಿಸಿತ್ತು.

ವೆಸ್ಟ್ ಇಂಡೀಸ್ ಒಡ್ಡಿದ್ದ 305 ರನ್‍ಗಳ ಕಠಿಣ ಗುರಿಯನ್ನು ಯಶಸ್ವಿಯಾಗಿ ಬೆಂಬತ್ತಿದ್ದ ಐರ್ಲೆಂಡ್, ಇನ್ನೂ 25 ಎಸೆತಗಳು ಉಳಿದಿರುವಂತೆಯೇ 6 ವಿಕೆಟ್ ಕಳೆದುಕೊಂಡು 307 ರನ್ ಗಳಿಸಿ ಗೆಲವಿನ ಕೇಕೆ ಹಾಕಿತ್ತು.

ಈ ಪಂದ್ಯದಲ್ಲಿ ಅತ್ಯುತ್ತಮ ಫಾರ್ಮ್ ತೋರಿದ್ದ ಪಾಲ್ ಸ್ಟಿರ್ಲಿಂಗ್, ಎಡ್ ಜಾಯ್ ಮತ್ತು ನಿಯಲ್ ಓಬ್ರಿಯಾನ್‍ರ ಮೇಲೆ ತಂಡ ಈ ಬಾರಿಯೂ ಹೆಚ್ಚು ನಂಬಿಕೆ ಇಟ್ಟುಕೊಂಡಿದೆ. ಉಳಿದಂತೆ, ಆರಂಭಿಕ ಬ್ಯಾಟ್ಸ್‍ಮನ್, ನಾಯಕ ಪೋರ್ಟರ್ ಫೀಲ್ಡ್,  ಬಲ್ಬಿರ್ನೆ, ವಿಕೆಟ್ ಕೀಪರ್ ವಿಲ್ಸನ್, ಕೆವಿನ್ ಒಬ್ರಿಯಾನ್ ಮೇಲೂ ಭರವಸೆ ಹೊಂದಿದೆ.

ಹಾಗೆಯೇ ಬೌಲಿಂಗ್‍ನಲ್ಲಿ ಮೂನಿ, ಸೊರೆನ್ಸೆನ್, ಮೆಕ್‍ಬ್ರಿಯಾನ್ ಮತ್ತು ಡಾಕ್ರೆಲ್ ಉತ್ತಮ ಲೈನ್ ಆ್ಯಂಡ್ ಲೆಂಗ್ತ್ ದಾಳಿ ನಡೆಸಲು ಶಕ್ತರಾದರೆ, ಐರ್ಲೆಂಡ್‍ಗೆ ಸುಲಭ ಗೆಲವು ದಕ್ಕುವುದರಲ್ಲಿ ಅನುಮಾನವಿಲ್ಲ. ಹಾಗೆಂದು, ಯುಎಇ ತಂಡವನ್ನು ಹಗುರವಾಗಿ ಕಾಣುವುದಿಲ್ಲ. ಐರ್ಲೆಂಡ್ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ, ಯುಎಇ ಆಟಗಾರರಿಂದ ಕಠಿಣ ಪೈಪೋಟಿ ನಿರೀಕ್ಷಿಸಬಹುದಾಗಿದೆ.

ಜಿಂಬಾಬ್ವೆ ವಿರುದ್ಧ ಆಡಿದ್ದ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಯುಎಇ 4 ವಿಕೆಟ್‍ಗಳ ಸೋಲು ಕಂಡಿತ್ತು. ಆದರೂ, ಈ ಪಂದ್ಯದಲ್ಲಿ ಜಿಂಬಾಬ್ವೆ ಮುಂದೆ ಕಠಿಣ ಸವಾಲನ್ನೇ ನಿಲ್ಲಿಸಿತ್ತು. ಉತ್ತಮ ಸಾಂಘಿಕ ಪ್ರದರ್ಶನ ನೀಡಿದ್ದ ಯುಎಇ ಸೋಲಿಗೆ ಅನುಭವದ ಕೊರತೆ ಕಾರಣವಾಗಿತ್ತು. ಆದರೆ, ಇಲ್ಲಿನ ಗುಣಮಟ್ಟದ ಪ್ರದರ್ಶನ ಯುಎಇ ಆಟಗಾರರ ಆತ್ಮವಿಶ್ವಾಸ ದುಪ್ಪಟ್ಟು ಹೆಚ್ಚಾಗುವಂತೆ ಮಾಡಿದೆ. ಹಾಗಾಗಿ, ಐರ್ಲೆಂಡ್ ಎಚ್ಚರಿಕೆಯಿಂದಲೇ ಇರಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್