ಪರ್ತ್: ವಿಶ್ವಕಪ್ ಪಂದ್ಯಾವಳಿಯಲ್ಲಿ ನಾಳೆ (ಶನಿವಾರ) ಭಾರತ ಮತ್ತು ಯುಎಇ ನಡುವೆ ನಡೆಯಲಿರುವ ಪಂದ್ಯದಲ್ಲಿ ಭಾರತೀಯ ಬೌಲರ್ ಮೊಹಮ್ಮದ್ ಶಮಿ ಅಲಭ್ಯವಾಗಲಿದ್ದಾರೆ.
ಮಂಡಿನೋವಿನಿಂದ ಬಳಲುತ್ತಿರುವ ಶಮಿಗೆ ಇಂಜೆಕ್ಷನ್ ನೀಡಿ ಆರಾಮ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಐಸಿಸಿ ವಿಶ್ಪಕಪ್ ವೆಬ್‌ಸೈಟ್ ನಲ್ಲಿ ಹೇಳಲಾಗಿದೆ.
24ರ ಹರೆಯ ಶಮಿ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಒಟ್ಟು 6 ವಿಕೆಟ್‌ಗಳನ್ನು ಪಡೆದಿದ್ದಾರೆ.