ರಣಜಿ ಟ್ರೋಫಿ 
ಕ್ರೀಡೆ

ಮುಂಬೈ ಪ್ರತಿರೋಧ ಪ್ರಯತ್ನ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿದ ಮುಂಬೈ...

ಬೆಂಗಳೂರು: ಆರಂಭದಲ್ಲಿ ನಾಯಕ ಆದಿತ್ಯ ತಾರೆ (98) ಜವಾಬ್ದಾರಿಯುತ ಬ್ಯಾಟಿಂಗ್, ಅಂತಿಮ ಘಟ್ಟದಲ್ಲಿ ಸಿದ್ದೇಶ್ ಲಾಡ್ (ಬ್ಯಾಟಿಂಗ್ 41) ಹಾಗೂ ಗಾಯಾಳು ಅಭಿಷೇಕ್ ನಾಯರ್ (ಬ್ಯಾಟಿಂಗ್ 2) ಅವರ ರಕ್ಷಣಾತ್ಮಕ ಆಟದ ನೆರವಿನಿಂದ ಮುಂಬೈ ತಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕಕ್ಕೆ ಹೋರಾಟ ನೀಡುವ ಪ್ರಯತ್ನ ನಡೆಸಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿದ ಮುಂಬೈ, ದಿನದಾಟ ಮುಕ್ತಾಯಕ್ಕೆ 6 ವಿಕೆಟ್ ಕಳೆದುಕೊಂಡು 277 ರನ್ ದಾಖಲಿಸಿದೆ. ಗೆಲ್ಲಲುನ್ನು 168 ರನ್‍ಗಳ ಅಗತ್ಯವಿದ್ದು, ಪಂದ್ಯ ನಾಲ್ಕನೇ ದಿನದಾಟಕ್ಕೆ ಜಾರಿದೆ.

ಎರಡನೇ ದಿನದಾಟದ ಮೊತ್ತ ವಿಕೆಟ್ ನಷ್ಟವಿಲ್ಲದೆ 61ರಿಂದ ಮೂರನೇ ದಿನದಾಟ ಆರಂಬಿsಸಿದ ಮುಂಬೈ, ಬಹುತೇಕ ದಿನದಾಟದ ಆರಂಭಿಕ ಎರಡು ಅವಧಿಗಳ ಕಾಲ ಕರ್ನಾಟಕ ಬೌಲರ್‍ಗಳ ದಾಳಿಯನ್ನು ರಕ್ಷಣಾತ್ಮಕವಾಗಿ ಎದುರಿಸುವ ಮೂಲಕ ಪ್ರತಿರೋಧ ನೀಡುವ ಪ್ರಯತ್ನ ನಡೆಸಿದರು. ಆದರೆ ಮಹತ್ವದ ಹಂತದಲ್ಲಿ ಪ್ರಮುಖ ವಿಕೆಟ್‍ಗಳನ್ನು ಕಳೆದುಕೊಂಡ ಮುಂಬೈ ಸಂಕಷ್ಟಕ್ಕೆ ಸಿಲುಕಿತು. ಅಂತಿಮ ಹಂತದಲ್ಲಿ ಲಾಡ್ ಹಾಗೂ ನಾಯರ್ ತಂಡಕ್ಕೆ ಆಸರೆಯಾದರು.

ನಾಯಕನ ಹೋರಾಟ ವ್ಯರ್ಥ್ಯ: ಕರ್ನಾಟಕ ನೀಡಿದ ಕಠಿಣ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡದ ಪರ ಕೆಚ್ಚೆದೆಯ ಹೋರಾಟ ನಡೆಸಿದ್ದು, ನಾಯಕ ಆದಿತ್ಯ ತಾರೆ. ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಇನಿಂಗ್ಸ್ ಕಟ್ಟಿದ ತಾರೆ, 15 ಬೌಂಡರಿ ಸೇರಿದಂತೆ 207 ಎಸೆತಗಳಲ್ಲಿ 98 ರನ್ ಗಳಿಸಿದರು. ಆದರೆ, ಶತಕದ ಹೊಸ್ತಿಲಲ್ಲಿ ಎಡವಿದ ಅವರು ತಮ್ಮ ಹೋರಾಟದ ಇನಿಂಗ್ಸ್‍ಗೆ ತೆರೆ ಎಳೆದುಕೊಂಡರು. ಎರಡನೇ ದಿನದಾಟದಲ್ಲಿ ಅಜೇಯವಾಗುಳಿದಿದ್ದ ತಾರೆ ಹಾಗೂ ಅಖಿಲ್ ಹೆರ್ವಾಡ್ಕರ್ ಮೂರನೇ ದಿನವೂ ತಂಡವನ್ನು ಉತ್ತಮ ಹಾದಿಯಲ್ಲಿ ಕರೆದೊಯ್ಯುವ ಗುರಿ ಹೊಂದಿದ್ದರು. ಆದರೆ, 31 ರನ್ ದಾಖಲಿಸಿದ್ದ ಅಖಿಲ್, ವೇಗಿ ಅಬಿsಮನ್ಯು ಮಿಥುನ್ ಎಲ್‍ಬಿ ಬಲೆಗೆ ಬಿದ್ದರು.

ಈ ವೇಳೆ ತಂಡವನ್ನು ಮುನ್ನಡೆಸಿದ ಆದಿತ್ಯ ತಾರೆ ಕರ್ನಾಟಕ ಬೌಲರ್‍ಗಳಿಗೆ ತಲೆ ನೋವಾಗಿ ಪರಿಣಮಿಸಿದರು. ಎರಡನೇ ವಿಕೆಟ್‍ಗೆ ಜತೆಯಾದ ಮುಂಬೈನ ಪ್ರಮುಖ ಬ್ಯಾಟ್ಸ್‍ಮನ್ ಶ್ರೇಯಸ್ ಅಯ್ಯರ್, ತಾರೆ ಜತೆಗೂಡಿ ಉತ್ತಮವಾಗಿ ಇನಿಂಗ್ಸ್ ಕಟ್ಟಿದರು. ಈ ಜೋಡಿ ಎರಡನೇ ವಿಕೆಟ್‍ಗೆ 76 ರನ್ ಕಲೆ ಹಾಕಿತು. ಆರಂಭದಲ್ಲಿ ಉತ್ತಪ್ಪರಿಂದ ಜೀವದಾನ ಪಡೆದ ಅಯ್ಯರ್ 50 ರನ್ ದಾಖಲಿಸಿ ಕರ್ನಾಟಕಕ್ಕೆ ಸವಾಲಾಗಿದ್ದರು. ಮಿಥುನ್ ಮಾರಕ ಬೌನ್ಸ್ ಅನ್ನು ಪುಲ್ ಮಾಡಲು ಹೋಗಿ ಸುಚಿತ್‍ಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು.

ಸೂರ್ಯಕುಮಾರ್ ಯಾದವ್ ತಾಳ್ಮೆಯ ಆಟಕ್ಕೆ ಮುಂದಾದರು. ಈ ವೇಳೆ ತಂಡಕ್ಕೆ ಆಸರೆಯಾಗಿ ನಿಂತಿದ್ದ ಆದಿತ್ಯ ತಾರೆ, 98 ರನ್‍ಗಳಿಸಿದ್ದಾಗ ಎಸ್. ಅರವಿಂದ್ ಅದ್ಭುತ ಎಸೆತಕ್ಕೆ ಬಲಿಯಾದರು. ಮತ್ತೊಂದೆಡೆ ಆರಂಭಿಕ 51 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದ ಸೂರ್ಯಕುಮಾರ್ ಕರ್ನಾಟಕದ ದಾಳಿಗೆ ತಡೆಗೋಡೆಯಾಗಿ ನಿಲ್ಲುವ ಪ್ರಯತ್ನ ನಡೆಸಿದರು. ಅಂತಿಮವಾಗಿ 119 ಎಸೆತಗಳಲ್ಲಿ 36 ರನ್ ದಾಖಲಿಸಿದ ನಂತರ ಮಿಥುನ್ ಬೌನ್ಸ್‍ಗೆ ನಲುಗಿ ವಿಕೆಟ್ ಒಪ್ಪಿಸಿದರು.

ನಿಖಿಲ್ ಖಾತೆ ತೆರೆಯುವ ಮುನ್ನವೇ ವಿನಯ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಎರಡನೇ ಅವ„ ಅಂತ್ಯದ ವೇಳೆ ನಿರಂತರವಾಗಿ ವಿಕೆಟ್ ಕಳೆದುಕೊಂಡಿದ್ದು, ತಂಡದ ಹಿನ್ನಡೆಗೆ ಕಾರಣವಾಯಿತು. ದಿನದಾಟದ ಅಂತಿಮ ಅವಧಿಯಲ್ಲಿ 24 ಓವರ್‍ಗಳಲ್ಲಿ ಕೇವಲ 40 ರನ್ ಗಳಿಸಿದ ಮುಂಬೈ ಮಂದಗಿಯ ಬ್ಯಾಟಿಂಗ್ ನಡೆಸಿತು. ಕ್ರೀಸ್‍ನಲ್ಲಿ ನಿಂತು ಆಡಿದ ಸಿದ್ದೇಶ್ ಲಾಡ್ 41 ಹಾಗೂ ಅಭಿಷೇಕ್ 2 ರನ್ ಗಳಿಸಿ ಆಟ ಕಾಯ್ದಿರಿಸಿದ್ದಾರೆ.

ಮಿಂಚಿದ ಮಿಥುನ್: ಕರ್ನಾಟಕ ತಂಡದ ಪರ ಮಾರಕ ದಾಳಿ ನಡೆಸಿದ ಮಿಥುನ್, ಮುಂಬೈ ಬ್ಯಾಟ್ಸ್‍ಮನ್‍ಗಳ ಪಾಲಿಗೆ ಸವಾಲಾಗಿ ನಿಂತರು. ಅದ್ಭುತ ಬೌನ್ಸ್ ಎಸೆತಗಳನ್ನು ಪ್ರಯೋಗಿಸಿದ ಮಿಥುನ್, ಮುಂಬೈನ ಅಗ್ರ ಮೂವರು ದಾಂಡಿಗರಿಗೆ ಪೆವಿಲಿಯನ್ ಹಾದಿ ತೋರಿದರು. ಮಿಥುನ್ 3 ವಿಕೆಟ್ ಕಬಳಿಸಿದರೆ, ವಿನಯ್, ಶ್ರೇಯಸ್ ಹಾಗೂ ಅರವಿಂದ್ ತಲಾ 1 ವಿಕೆಟ್ ಕಬಳಿಸಿದರು.

ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ 202
ಮುಂಬೈ ಮೊದಲ ಇನಿಂಗ್ಸ್ 44
ಕರ್ನಾಟಕ ಎರಡನೇ ಇನಿಂಗ್ಸ್ 286
ಮುಂಬೈ ಎರಡನೇ ಇನಿಂಗ್ಸ್ 107
ಓವರುಗಳಲ್ಲಿ 6 ವಿಕೆಟ್‍ಗೆ 277

- ಸೋಮಶೇಖರ ಪಿ. ಭದ್ರಾವತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ: ವಿಮಾನ ನಿಲ್ಗಾಣದಲ್ಲಿ Riyan Parag ಗರಂ, ವೈಭವ್ ಸೂರ್ಯವಂಶಿ ಶಾಕ್! Video

Video: 'ಕಾಂತಾರ' ಕೆಂಗಣ್ಣಿಗೆ ಗುರಿ, ಬಾಲಿವುಡ್​ನಿಂದ ಬ್ಯಾನ್; ಚಾಮುಂಡೇಶ್ವರಿಗೆ ತಲೆಬಾಗಿ ಕ್ಷಮೆಯಾಚಿಸಿದ ರಣವೀರ್ ಸಿಂಗ್!

IPL 2026: RCB vs GT ನಡುವಿನ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಆತಂಕ, ರಿಸರ್ವ್ ಡೇ ಕೂಡ ಇಲ್ಲ.. ಪಂದ್ಯ ರದ್ದಾದರೆ ಯಾರು ಫೈನಲ್ ಗೆ?

SCROLL FOR NEXT