ಬ್ರಿಸ್ಬೇನ್: ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ಮೂಲಕ ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಸೋಲು ಅನುಭವಿಸಿದ್ದ ಪಾಕಿಸ್ತಾನ ವಿಶ್ವಕಪ್ ನಲ್ಲಿ ಮೊದಲ ಗೆಲವು ದಾಖಲಿಸಿದೆ.
ಜಿಂಬಾಬ್ವೆ ವಿರುದ್ದದ ಪಂದ್ಯದಲ್ಲಿ ಪಾಕಿಸ್ಥಾನ 20 ರನ್‌ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟ್ ಪಾಕ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿತ್ತು. 236 ರನ್ ಸುಲಭ ಗುರಿಯನ್ನು ಬೆನ್ನತ್ತಿದ್ದ ಜಿಂಬಾಬ್ವೆ 215 ರನ್ ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡು 20 ರನ್ ಗಳಿಂದ ಪರಾಭವಗೊಂಡಿತ್ತು.
ಪಾಕ್ ಪರ ಮಿಸ್ಬಾ ಉಲ್ ಹಕ್ 73 ರನ್, ಹ್ಯಾರಿಸ್ ಸೊಹೈಲ್ 23, ಉಮರ್ ಅಕ್ಮಲ್ 33, ಮಕ್ಸೂದ್ 21 ಮತ್ತು ವಹಾಬ್ ರಿಯಾಜ್ ಔಟಾಗದೆ 54 ರನ್ ಗಳಿಸಿದ್ದರು.
ಜಿಂಬಾಬ್ವೆ ಪರ ಟೆಲರ್ 50, ಮಸಕಡ್ಜ 29, ವಿಲಿಯಮ್ಸ್ 33, ಚಿಗಂಬುರಾ ಅಜೇಯ 33 ರನ್ ಗಳಿಸಿದರು.
ಪಾಕ್ ಪರ ಇರ್ಫಾನ್ 4, ರಿಯಾಜ್ 3 ವಿಕೆಟ್ ಪಡೆದರು.