ನವದೆಹಲಿ: ಮಾನ್ಯತೆ ವಿಚಾರದಲ್ಲಿ ಭಾರತೀಯ ಒಲಿಪಿಂಕ್ಸ್ ಸಂಸ್ಥೆ (ಐಒಸಿ)ಯಿಂದ ನಿರ್ಲಕ್ಷ್ಯಕ್ಕೊಗಳಗಾಗಿರುವ ಬಾಕ್ಸಿಂಗ್ ಇಂಡಿಯಾ (ಬಿಐ) ಸಂಸ್ಥೆಗೆ ಕೇಂದ್ರ ಕ್ರೀಡಾ ಇಲಾಖೆ ಮಾನ್ಯತೆ ನೀಡಿದೆ.
ಇದು ಸಂಸ್ಥೆಗೆ ಆತ್ಮಸ್ಥೈರ್ಯವನ್ನು ತುಂಬಿದರೆ, ಐಒಸಿಗೆ ಭಾರಿ ಮುಖಭಂಗ ಉಂಟುಮಾಡಿದೆ. ಅದರಲ್ಲೂ ಪದೇ ಪದೇ ಮನವಿ ಮಾಡಿದ ನಂತರವೂ, ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ)ಯಿಂದ ಮಾನ್ಯತೆ ದೊರೆತಿದ್ದರೂ ಬಾಕ್ಸಿಂಗ್ ಇಂಡಿಯಾಗೆ ಭಾರತದಲ್ಲಿ ಮಾನ್ಯತೆ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದ ಐಒಎಗೆ ಈಗ ತೀವ್ರ ಹಿನ್ನಡೆ ಉಂಟಾಗಿದೆ. ಕೇಂದ್ರ ಸರ್ಕಾರ ತಮ್ಮ ಸಂಸ್ಥೆಗೆ ಮಾನ್ಯತೆ ನೀಡಿರುವುದಕ್ಕೆ ಬಿಐ ಅಧ್ಯಕ್ಷ ಸಂದೀಪ್ ಜಜೋಡಿಯಾ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ, ಕೇಂದ್ರ ಸರ್ಕಾರಕ್ಕೆ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.