ಸೈನಾ ನೆಹ್ವಾಲ್ 
ಕ್ರೀಡೆ

ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದಕ್ಕೆ ಸೈನಾ ಬೇಸರ

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಪದ್ಮಭೂಷಣ ಪ್ರಶಸ್ತಿಗಾಗಿ ಸಲ್ಲಿಸಿದ ಅರ್ಜಿಯನ್ನು...

ನವದೆಹಲಿ: ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಪದ್ಮಭೂಷಣ ಪ್ರಶಸ್ತಿಗಾಗಿ ಸಲ್ಲಿಸಿದ ಅರ್ಜಿಯನ್ನು ಕ್ರೀಡಾ ಸಚಿವಾಲಯ ತಿರಸ್ಕರಿಸಿದೆ.

ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ)  ಸೈನಾ ನೆಹ್ವಾಲ್ ಹೆಸರನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು. ಆದರೆ ಕ್ರೀಡಾ ಸಚಿವಾಲಯ ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದ ಕುಸ್ತಿಪಟು ಸುಶೀಲ್ ಕುಮಾರ್ ಅವರ ಹೆಸರನ್ನು ಪ್ರಶಸ್ತಿಗಾಗಿ ಆಯ್ಕೆಮಾಡಿದೆ.

ಸುಶೀಲ್ ಕುಮಾರ್ ಅವರ ಹೆಸರನ್ನು ಪ್ರಶಸ್ತಿಗಾಗಿ ಕಳುಹಿಸಲಾಗಿದೆ ಮತ್ತು ಕ್ರೀಡಾ ಸಚಿವಾಲಯ ನನ್ನ ಹೆಸರನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿಲ್ಲ ಎಂದು ನನಗೆ ತಿಳಿದುಬಂದಿದೆ. ಎರಡು ಪದ್ಮ ಪ್ರಶಸ್ತಿಗಳ ನಡುವೆ 5 ವರ್ಷದ ಅಂತರ ಇರಬೇಕು ಎಂದು ಸಚಿವಾಲಯದ ನಿಬಂಧನೆಯಲ್ಲಿ ಹೇಳಲಾಗಿದೆ. ಹೀಗಿರುವಾಗ ಕ್ರೀಡಾ ಸಚಿವಾಲಯ ಆತನ (ಸುಶೀಲ್ ಕುಮಾರ್) ಹೆಸರು ಕಳುಹಿಸಿದ್ದಾರೆ. ನನ್ನ ಹೆಸರನ್ನು ಯಾಕೆ ಶಿಫಾರಸು ಮಾಡಿಲ್ಲ? ನಾನು 5 ವರ್ಷಗಳನ್ನು ಪೂರೈಸಿದ್ದೇನೆ. ಈ ಬಗ್ಗೆ ನನಗೆ ಬೇಸರವಾಗಿದೆ ಎಂದು ಸೈನಾ ಹೇಳಿದ್ದಾರೆ.

ಸೈನಾ ಅವರಿಗೆ 2010ರಲ್ಲಿ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು.

ಸುಶೀಲ್ ಕುಮಾರ್ ಅವರಿಗೆ 2011ರಲ್ಲಿ ಪದ್ಮಶ್ರೀ ನೀಡಲಾಗಿತ್ತು. ಆದಾಗ್ಯೂ, ಸುಶೀಲ್ ಕುಮಾರ್ ಅವರು ಪದ್ಮಶ್ರೀ ಪಡೆದು 5 ವರ್ಷಗಳಾಗದೇ ಇದ್ದರೂ ಅವರನ್ನು ಪದ್ಮಭೂಷಣ  ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಇತ್ತ ಸೈನಾ ಹೆಸರನ್ನು ಕಳೆದ ವರ್ಷ ಪ್ರಶಸ್ತಿಗಾಗಿ ಕ್ರೀಡಾ ಇಲಾಖೆಗೆ ಕಳುಹಿಸಿಕೊಟ್ಟಿದ್ದರೂ ಪದ್ಮ ಪ್ರಶಸ್ತಿ ಪಡೆದು 5 ವರ್ಷ ಪೂರೈಸಿಲ್ಲ ಎಂಬ ಕಾರಣ ನೀಡಿ ಕೈಬಿಡಲಾಗಿತ್ತು. ಈ ವರ್ಷವೂ ಇದು ಪುನರಾವರ್ತಿಸಿದೆ. ಹೀಗೆ ಯಾಕೆ ಮಾಡಲಾಗುತ್ತಿದ್ದೆ? ನನ್ನ ಹೆಸರನ್ನು ಯಾಕೆ ಶಿಫಾರಸು ಮಾಡುತ್ತಿಲ್ಲ? ಎಂದು ಸೈನಾ ಕ್ರೀಡಾ ಸಚಿವಾಲಯವನ್ನು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ