ಲಿಯಾಂಡರ್ ಪೇಸ್ 
ಕ್ರೀಡೆ

ಲಿಯಾಂಡರ್ ಶುಭಾರಂಭ

ಭಾರತದ ಲಿಯಾಂಡರ್ ಪೇಸ್ ಹಾಗೂ ರವೆನ್ ಕ್ಲಾಸೆನ್ ಜೋಡಿ, ಮಂಗಳವಾರ ನಡೆದ ಚೆನ್ನೈ...

ಚೆನ್ನೈ: ಭಾರತದ ಲಿಯಾಂಡರ್ ಪೇಸ್ ಹಾಗೂ ರವೆನ್ ಕ್ಲಾಸೆನ್ ಜೋಡಿ, ಮಂಗಳವಾರ ನಡೆದ ಚೆನ್ನೈ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸಿದೆ.

ದಕ್ಷಿಣ ಆಫ್ರಿಕಾದ ರವೆನ್ ಕ್ಲಾಸೆನ್ ಅವರೊಂದಿಗೆ ಕಣಕ್ಕಿಳಿದಿದ್ದ ಪೇಸ್, ಎದುರಾಳಿ ಜೋಡಿ ಆಸ್ಟ್ರೀಯಾದ ಆ್ಯಂಡ್ರಿಯಾಸ್ ಹೈದರ್-ಮೌರರ್ ಹಾಗೂ ಸ್ಲೋವಾಕಿಯಾದ ಲ್ಯೂಕಸ್ ಲಾಕೊ ಜೋಡಿ ವಿರುದ್ಧ 6-4, 6-4 ಅಂತರದಲ್ಲಿ ಗೆಲವು ಪಡೆದು ಎರಡನೇ ಸುತ್ತಿಗೆ ಕಾಲಿಟ್ಟಿದೆ.

ಸಿಂಗಲ್ಸ್‌ನಲ್ಲಿ ನಿರಾಸೆ: 20ನೇ ಆವೃತ್ತಿಯ ಚೆನ್ನೈ ಓಪನ್ ಎಟಿಪಿ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ನಿರಾಸೆಯ ಪ್ರದರ್ಶನ ಮುಂದುವರಿದಿದೆ. ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸೋಮ್‌ದೇವ್ ದೇವವರ್ಮನ್, ವಿಜಯ್ ಸುಂದರ್ ಪ್ರಶಾಂತ್, ರಾಮ್‌ಕುಮಾರ್ ರಾಮನಾಥನ್ ಅವರು ಸೋಲು ಕಂಡರು.

ಸೋಮ್‌ದೇವ್ ದೇವವರ್ಮನ್, ತೈವಾನ್‌ನ ಲು ಯೆನ್-ಸುನ್ ವಿರುದ್ಧ 9-6, 4-6 ಸೆಟ್‌ಗಳಲ್ಲಿ ಸೋತರೆ, ವಿಜಯ್ ಸುಂದರ್ ಪ್ರಶಾಂತ್ ಚೆಕ್ ರಿಪಬ್ಲಿಕ್‌ನ ಜಿರಿ ವೆಸಲಿ ವಿರುದ್ಧ 2-6, 1-6 ಸೆಟ್‌ಗಳ ಮೂಲಕ ಪರಾಭವ ಹೊಂದಿದರು. ಇನ್ನು, ರವಿಕುಮಾರ್ ರಾಮನಾಥನ್, ಜಪಾನ್‌ನ ಟಟ್ಸುಮೈಟೊ ವಿರುದ್ಧ 3-6, 3-6 ಸೆಟ್‌ಗಳಲ್ಲಿ ಸೋತರು.

ವಾವ್ರಿಂಕಾಗೆ ಜಯ: ಪುರುಷರ ಡಬಲ್ಸ್ ವಿಭಾಗದ ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ, ಸ್ವಿಡ್ಜರ್ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ-ಸ್ಪೇನ್‌ನ ರಾಬಸ್ಟೋಸ್ ಬೌಟಿಸ್ತಾ ಆಗಸ್ತ್ ಜೋಡಿ, ಸ್ವೀಡನ್‌ನ ಜೊಹನ್ ಬ್ರುನ್‌ಸ್ಟೊಮ್-ಒಕ್ಲಾಹೊಮಾದ ನಿಕೋಲಸ್ ಮೊನ್ರೊ ಜೋಡಿಯನ್ನು 5-7, 6-3, 10-8 ಸೆಟ್‌ಗಳಲ್ಲಿ ಪರಾಭವಗೊಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!