ಭಾರತದ ಹಿರಿಯ ಟೆನಿಸ್ ಆಟಗಾರ ಮಹೇಶ್ ಭೂಪತಿ ( ಸಾಂದರ್ಭಿಕ ಚಿತ್ರ ) 
ಕ್ರೀಡೆ

ಮಹೇಶ್ ಭೂಪತಿಗೆ ಜಯ

ಭಾರತದ ಹಿರಿಯ ಟೆನಿಸ್ ಆಟಗಾರ ಮಹೇಶ್ ಭೂಪತಿ, ಚೆನ್ನೈ ಓಪನ್‌ನ ಪುರುಷರ ಡಬಲ್ಸ್...

ಚೆನ್ನೈ: ಭಾರತದ ಹಿರಿಯ ಟೆನಿಸ್ ಆಟಗಾರ ಮಹೇಶ್ ಭೂಪತಿ, ಚೆನ್ನೈ ಓಪನ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಸುತ್ತನ್ನು ಪ್ರವೇಶಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ, ಭಾರತದವರೇ ಆದ ಸಾಕೇತ್ ಮೈನೇನಿ ಜೊತೆ ಕಣಕ್ಕಿಳಿದಿದ್ದ ಮಹೇಶ್, ಭಾರತದ ಜೋಡಿಯಾದ ಚಂದ್ರಿಲ್ ಸೂದ್ ಹಾಗೂ ಲಕ್ಷಿತ್ ಸೂದ್ ಜೋಡಿ ವಿರುದ್ಧ  6-7 (4), 6-4, 10-6 ಸೆಟ್‌ಗಳಲ್ಲಿ ಜಯ ಸಾಧಿಸಿತು.

ಡಬಲ್ಸ್‌ ವಿಭಾಗದ ಮತ್ತೊಂದು ಪಂದ್ಯದಲ್ಲಿ ಭಾರತದ ಪುರವ್ ರಾಜಾ ಹಾಗೂ ಕೆನಡಾದ ಆದಿಲ್ ಶಮಸ್ದಿನ್ ಜೋಡಿ, ಸ್ಲೋವೇಕಿಯಾದ ಅಲ್ಜಾಜ್ ಬೆಡೇನ್ ಹಾಗೂ ಬೋಸ್ನಿಯಾದ ಡಾಮಿರ್ ಡಿಝುಮ್‌ಹುರ್ ಜೋಡಿ ವಿರುದ್ಧ 6-1, 6-2 ನೇರ ಸೆಟ್‌ಗಳಲ್ಲಿ ಜಯ ಸಾಧಿಸಿತು.

ವಾವ್ರಿಂಕಾಗೆ ಜಯ:
ಸ್ವಿಡ್ಜರ್ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ಚೆನ್ನೈ ಓಪನ್ ಪುರಷರ ಸಿಂಗಲ್ಸ್ ವಿಭಾಗದಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ. ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕ್ರೊವೇಶಿಯಾದ ಬೊರ್ನಾಕೋರಿಕ್ ವಿರುದ್ಧ 6-1, 6-4 ಸೆಟ್‌ಗಳಲ್ಲಿ ಜಯ ಸಾಧಿಸಿ, ಮುನ್ನಡೆ ಪಡೆದರು.

ಇನ್ನುಳಿದಂತೆ, ಪುರುಷರ ಸಿಂಗಲ್ಸ್‌ನಲ್ಲಿ ಬುಧವಾರ ನಡೆದ ಇನ್ನಿತರ ಮೂರು ಪಂದ್ಯಗಳಲ್ಲಿ ಆಸ್ಟ್ರೀಯಾದ ಆ್ಯಂಡ್ರಿಯಾಸ್ ಹೈದರ್-ಮೌರರ್, ಬೆಲ್ಜಿಯಂನ ಡೇವಿಡ್ ಗಾಫಿನ್ ಹಾಗೂ ಲಕ್ಸೆಂಬರ್ಗ್‌ನ ಗಿಲ್ಸ್ ಮುಲ್ಲರ್ ಗೆಲುವು ಪಡೆದಿದ್ದಾರೆ.

ಚೆಕ್ ಗಣರಾಜ್ಯದ ಜಿರಿ ವ್ಯಾಸೆಲಿ ವಿರುದ್ಧ ಸೆಣಸಿದ ಆ್ಯಂಡ್ರಿಯಾಸ್ 6-7 (3-7), 6-4, 6-4 ಸೆಟ್‌ಗಳ ಜಯ ಸಾಧಿಸಿದರೆ, ರಿಕಾರ್ಡಸ್ ಬೆರಾಂಕಿಸ್ ವಿರುದ್ಧದ ಪಂದ್ಯದಲ್ಲಿ ಗಾಫಿನ್ 6-0, 4-6, 7-6 (7-1) ಗೆಲವು ಪಡೆದರು. ಇನ್ನು, ಸ್ವೀಡನ್‌ನ ಎಲಿಯಾಸ್ ಎಮರ್ ವಿರುದ್ಧ ಮುಲ್ಲರ್ 6-4, 6-3 ಸೆಟ್‌ಗಳ ಜಯ ಸಂಪಾದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!