ನ್ಯೂಜಿಲೆಂಡ್ 
ಕ್ರೀಡೆ

ಕಿವೀಸ್ ಸರಣಿ ಕ್ಲೀನ್ ಸ್ವೀಪ್

ವೆಲ್ಲಿಂಗ್ಟನ್: ಪ್ರವಾಸಿ ಶ್ರೀಲಂಕನ್ನರು ಎರಡನೇ ಇನಿಂಗ್ಸ್‌ನಲ್ಲಿ ನಾಟಕೀಯ ಕುಸಿತ ಕಾಣುವುದರೊಂದಿಗೆ ಎರಡನೇ ಹಾಗೂ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ದಯನೀಯ ಸೋಲು ಕಂಡಿದ್ದಾರೆ.

ಬಾಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರರು ಇನಿಂಗ್ಸ್ ಮತ್ತು 193 ರನ್‌ಗಳ ಭಾರಿ ಅಂತರದಲ್ಲಿ ಶ್ರೀಲಂಕಾ ಎದುರು ಜಯಭೇರಿ ಬಾರಿಸುವುದರೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದ್ದಾರೆ. ಗೆಲ್ಲಲು ಎರಡನೇ ಇನಿಂಗ್ಸ್‌ನಲ್ಲಿ 390 ರನ್‌ಗಳ ಗುರಿ ತಲುಪಬೇಕಿದ್ದ ಶ್ರೀಲಂಕಾ ಪಡೆಗೆ 196 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಲಹಿರು ತಿರಿಮಾನೆ ಮತ್ತು ಕೌಶಾಲ್ ಸಿಲ್ವಾ ಅರ್ಧಶತಕ ಬಿಟ್ಟರೆ, ಇತರೆ ಬ್ಯಾಟ್ಸ್‌ಮನ್‌ಗಳು ದಯನೀಯ ವೈಫಲ್ಯ ಅನುಭವಿಸುವುದರೊಂದಿಗೆ ಲಂಕಾ ತಂಡ ಸುಲಭವಾಗಿಯೇ ಪಂದ್ಯವನ್ನು ಕೈಚೆಲ್ಲಿತು.

ಶ್ರೀಲಂಕನ್ನರು ಮೊದಲ ಇನಿಂಗ್ಸ್‌ನಲ್ಲಿ 135 ರನ್‌ಗಳ ಮುನ್ನಡೆ ಸಾಧಿಸಿದ್ದರೂ ಸಹ ಎರಡನೇ ಇನಿಂಗ್ಸ್ ಬ್ಯಾಟಿಂಗ್‌ನಲ್ಲಿ ನ್ಯೂಜಿಲೆಂಡ್ ದಾಂಡಿಗರು ಅಬ್ಬರಿಸಿದ ರೀತಿ ಪ್ರವಾಸಿಗರನ್ನು ಬೆಚ್ಚಿಬೀಳಿಸಿತು. ಆಸ್ಟ್ರೇಲಿಯಾದ ಎರಡನೇ ಇನಿಂಗ್ಸ್‌ನಲ್ಲಿ ದ್ವಿಶತಕ ಗಳಿಸಿದ್ದ ಕೇನ್ ವಿಲಿಯಮ್ಸನ್ ಪಂದ್ಯಶ್ರೇಷ್ಠ ಗೌರವ ಪಡೆದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT