ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ಆಟಗಾರ ರುಬೆಲ್ ಹುಸೇನ್ 2015ರ ವಿಶ್ವಕಪ್‌ಗೆ ಆಯ್ಕೆಯಾಗಿದ್ದರು. ಆದರೆ ನಟಿ ನಜ್ನಿದ್ ಅಖ್ತರ್ ಹ್ಯಾಪಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಮೇಲೆ ಜೈಲು ಸೇರಿದ್ದಾರೆ.
ನಟಿ ನಜ್ನಿನ್ ರುಬೆಲ್ ಹುಸೇನ್ ಮೇಲೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಈ ಸಂಬಂಧ ವಿಚಾರಣೆ ಮಾಡಿದ ಢಾಕಾ ಕೋರ್ಟ್ ಹುಸೇನ್ ಬಂಧನಕ್ಕೆ ಆದೇಶಿಸಿತ್ತು.
ಕೋರ್ಟ್ ಆದೇಶದಂತೆ ಬಾಂಗ್ಲಾ ಪೊಲೀಸರು ರುಬೆಲ್‌ನನ್ನು ಬಂಧಿಸಿದ್ದಾರೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಹುಸೇನ್ ಇದೀಗ ಬಾಂಗ್ಲಾ ಪರ ಆಡೋದು ಅನುಮಾನವಾಗಿದೆ.
ಕಳೆದ ತಿಂಗಳು ನಜ್ನಿದ್ ಅಖ್ತರ್ ಅತ್ಯಾಚಾರ ಆರೋಪ ಹಾಗೂ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ದೂರು ದಾಖಲಿಸಿದ್ದರು. ಇನ್ನು ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.