ಕ್ರೀಡೆ

ವಿಶ್ವಕಪ್ ಗೆ ಬ್ರಾವೋ, ಪೊಲ್ಲಾರ್ಡ್ ಇಲ್ಲ

Srinivasamurthy VN

ಬ್ರಿಸ್ಬೇನ್: ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಏಕದಿನ ತಂಡದ ಮಾಜಿ ನಾಯಕ ಡ್ವೈನ್ ಬ್ರಾವೋ ಮತ್ತು ಸ್ಫೋಟಕ ಬ್ಯಾಟ್ಸ್ ಮನ್, ಆಲ್ ರೌಂಡರ್ ಕೀರನ್ ಪೊಲ್ಲಾರ್ಡ್ ಅವರನ್ನು ವೆಸ್ಟ್ ಇಂಡೀಸ್ ತಂಡದಿಂದ ಕೈ ಬಿಡಲಾಗುತ್ತದೆ.

ವೆಸ್ಟ್ ಇಂಡೀಸ್ ಆಟಗಾರರ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವೆಸ್ಟ್ ಇಂಡೀಸ್ ತಂಡದ ಮಾಜಿ ಲೆಗ್ಸ್ಪಿನ್ನರ್ ದೀನಾನಾಥ್ ರಾಮನಾರಾಯಣ್, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿ ಆತಿಥ್ಯದಲ್ಲಿ ಮುಂದಿನ ತಿಂಗಳ ಫೆಬ್ರವರಿ 14ರಿಂದ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ, ಶೀಘ್ರವೇ ಅಧಿಕೃತ ತಂಡವನ್ನು ಪ್ರಕಟಿಸಲಿದೆ. ಅದಕ್ಕೂ ಮುನ್ನವೇ, ರಾಮನಾರಾಯಣ್ ಅವರು ಬ್ರಾವೋ ಮತ್ತು ಪೊಲ್ಲಾರ್ಡ್ ಹೊರಗುಳಿಯುವ ಬಗ್ಗೆ ಟ್ವೀಟ್ ಮಾಡುವ ಮೂಲಕ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದಾರೆ.

ಪ್ರಸ್ತುತ ಈ ಇಬ್ಬರೂ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ಟಿ-20 ಸರಣಿಯಲ್ಲಿ ತೊಡಗಿದ್ದಾರೆ. ಆದರೆ, ಕಳೆದ ತಿಂಗಳಷ್ಟೇ ಕ್ಲೈವ್ ಲಾಯ್ಡ್ ನೇತೃತ್ವದ ವಿಂಡೀಸ್ ಕ್ರಿಕೆಟ್ ಮಂಡಳಿಯ ಆಯ್ಕೆ ಸಮಿತಿಯು ಬ್ರಾವೋ, ಪೊಲ್ಲಾರ್ಡ್ ಮತ್ತು ಡಾರೆನ್ ಸಮಿ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಕೈ ಬಿಟ್ಟಿತ್ತು. ಗುತ್ತಿಗೆ ವಿಷಯಕ್ಕೆ ಸಂಬಂಧಿಸಿದಂತೆ ಆಟಗಾರರು, ಮುಂಡಳಿ ಮತ್ತು ಆಟಗಾರರ ಸಂಸ್ಥೆ ನಡುವಿನ ವಿವಾದ ಕಾರಣಕ್ಕೆ ಹಿರಿಯ ಆಟಗಾರರು ವಿಶ್ವಕಪ್ ನಿಂದ ಅವಕಾಶ ವಂಚಿತರಾದಂತಾಗಿದೆ.

SCROLL FOR NEXT