ಡೇವಿಡ್ ವಾರ್ನರ್ 
ಕ್ರೀಡೆ

ಆಸೀಸ್‌ಗೆ ಜಯ

ಆರಂಭಿಕ ಡೇವಿಡ್ ವಾರ್ನರ್ ಅವರ ಭರ್ಜರಿ ಶತಕದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯನ್ನರು ಏಕದಿನ ತ್ರಿಕೋನ ಕ್ರಿಕೆಟ್ ಸರಣಿಯ...

ಸಿಡ್ನಿ: ಆರಂಭಿಕ ಡೇವಿಡ್ ವಾರ್ನರ್ ಅವರ ಭರ್ಜರಿ ಶತಕದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯನ್ನರು ಏಕದಿನ ತ್ರಿಕೋನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 3 ವಿಕೆಟ್‌ಗಳಿಂದ ಗೆಲವು ದಾಖಲಿಸಿ ಶುಭಾರಂಭ ಮಾಡಿದ್ದಾರೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು 235 ರನ್‌ಗಳ ಗುರಿ ಪಡೆದಿದ್ದ ಆಸ್ಟ್ರೇಲಿಯಾ ಇನ್ನೂ 10.1 ಓವರುಗಳು ಉಳಿದಿರುವಂತೆಯೇ 7 ವಿಕೆಟ್ ಕಳೆದುಕೊಂಡು ವಿಜಯದ ಕಹಳೆ ಮೊಳಗಿಸಿತ್ತು.

ಡೇವಿಡ್ ವಾರ್ನರ್ ಕೇವಲ 115 ಎಸೆತಗಳಲ್ಲಿ 18 ಬೌಂಡರಿ ಹೊಂದಿದ್ದ 127 ರನ್ ಗಳಿಸಿದರು. ಅಚ್ಚರಿ ಎಂದರೆ, ಆಸ್ಟ್ರೇಲಿಯನ್ನರು ಕೊನೆಯಘಟ್ಟದಲ್ಲಿ ಅನಗತ್ಯವಾಗಿ ವಿಕೆಟ್ ಕಳೆದುಕೊಂಡು. 199ರಿಂದ 233ರ ಮೊತ್ತದೊಳಗೆ 4 ವಿಕೆಟ್ ಒಪ್ಪಿಸಿದರು. ಆದರೆ, ಅದಾಗಲೇ ಗುರಿಯ ಸಮೀಪ ಬಂದು ನಿಂತಿದ್ದರಿಂದ ಆಸ್ಟ್ರೇಲಿಯನ್ನರ ಮೇಲೆ ಇದು ಗಂಭೀರ ಪರಿಣಾಮವನ್ನೇನೂ ಬೀರಲಿಲ್ಲ.

ಇಂಗ್ಲೆಂಡ್ ದಾಳಿ ಚುರುಕಿನಿಂದ ಕೂಡಿರಲಿಲ್ಲ. ವೋಕ್ಸ್ 4 ವಿಕೆಟ್ ಪಡೆದಿದ್ದು ಉತ್ತಮ ಸಾಧನೆಯಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT