ಕ್ರೀಡೆ

ರೋಹಿತ್ ಆಟಕ್ಕೆ ಧೋನಿ ಪ್ರಶಂಸೆ

Vishwanath S

ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧದ ತ್ರಿಕೋನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಕರ್ಷಕ ಶತಕ ದಾಖಲಿಸಿ ತಂಡಕ್ಕೆ ಜೀವ ತುಂಬಿದ ರೋಹಿತ್ ಶರ್ಮಾ ಇನಿಂಗ್ಸ್ ಅನ್ನು ನಾಯಕ ಮಹೇಂದ್ರ ಸಿಂಗ್ ಧೋನಿ ಹೊಗಳಿದ್ದಾರೆ.

ಭಾನುವಾರ ಪಂದ್ಯದ ನಂತರ ಮಾತನಾಡಿದ ಧೋನಿ, ರೋಹಿತ್ ಶರ್ಮಾ ಕಳೆದ ಎರಡು ವರ್ಷಗಳಿಂದ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಉತ್ತಮ ಆರಂಭಕ್ಕೆ ಸಿಕ್ಕ ನಂತರ ದೊಡ್ಡ ಇನಿಂಗ್ಸ್ ಕಟ್ಟುವ ಕಲೆ ರೋಹಿತ್ ಶರ್ಮಾಗೆ ಇದೆ ಎಂದು ಧೋನಿ ತಿಳಿಸಿದ್ದಾರೆ.

ಕಳೆದ ಒಂದೂವರೆ ವರ್ಷದಲ್ಲಿ ಬ್ಯಾಟಿಂಗ್ ದಾಖಲೆಯನ್ನು ನೋಡಿದರೆ ಬಹುತೇಕ ಎಲ್ಲಾ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಿದ್ದಾರೆ. ಆದರೆ ರೋಹಿತ್ ಶರ್ಮಾ ಸ್ಥಿರವಾಗಿ ರನ್ ಗಳಿಸುತ್ತಿರುವುದು ವಿಶೇಷ. ರೋಹಿತ್‌ಗೆ ದೊಡ್ಡ ಇನಿಂಗ್ಸ್ ಅನ್ನು ಹೇಗೆ ಆಡಬೇಕು ಎಂಬುದು ತಿಳಿದಿದೆ. ಅಲ್ಲದೆ ಸಿಕ್ಕ ಉತ್ತಮ ಆರಂಭವನ್ನು ಬೆಳೆಸುವ ಬಗ್ಗೆ ಅರಿವಿದೆ ಎಂದಿದ್ದಾರೆ.

SCROLL FOR NEXT