ಕ್ರೀಡೆ

1979 ರಲ್ಲಿ ಮುಂದುವರೆದ ಕೆರಿಬಿಯನ್ನರ ಪ್ರಾಬಲ್ಯ

Srinivasamurthy VN

ಎರಡನೇ ವಿಶ್ವಕಪ್‍ನಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿದ್ದ ವೆಸ್ಟ್ ಇಂಡೀಸ್ ತಂಡ ತನ್ನ ವಿಶ್ವ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಈ ಪಂದ್ಯಾವಳಿಯನ್ನು 1975ರ ಮಾದರಿಯಲ್ಲೇ ನಡೆಸಲಾಗಿತ್ತು. ಎಂಟು ತಂಡಗಳು ಭಾಗವಹಿಸಿದ್ದು, ಎರಡು ಗುಂಪುಗಳಾಗಿ ಲೀಗ್‍ನಲ್ಲಿ ಸೆಣಸಿದ್ದವು. ಟೆಸ್ಟ್ ಮಾನ್ಯತೆ ಪಡೆದಿದ್ದ ಆರು ತಂಡಗಳ ಹೊರತಾಗಿ ಶ್ರೀಲಂಕಾ ಹಾಗೂ ಕೆನಡಾ ತಂಡಗಳು ಪ್ರಮುಖ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದವು.

ಈ ಪಂದ್ಯಾವಳಿಯನ್ನು ಸಹ ಪ್ರುಡೆಂನ್ಷಿಯಲ್ (ಬ್ರಿಟನ್‍ನ ಜೀವ ವಿಮಾ ಕಂಪನಿ) ವಹಿಸಿದ್ದ ಹಿನ್ನೆಲೆಯಲ್ಲಿ ಪ್ರುಡೆಂನ್ಷಿಯಲ್ ಕಪ್ ಎಂದೇ ಮುಂದುವರಿದಿತ್ತು. ಅಲ್ಲದೆ 60 ಓವರ್ ಮಾದರಿಯ ಮುಂದುವರಿದಿದ್ದು, ಸಂಪ್ರಾದಾಯಿಕ ಬಿಳಿ ಉಡುಗೆಯೊಂದಿಗೆ ಕೆಂಪು ಚೆಂಡಿನಲ್ಲಿ ಪಂದ್ಯಗಳನ್ನಾಡಲಾಯಿತು.ಟೂರ್ನಿಯಲ್ಲಿ ಫೇವರಿಟ್ ಆಗಿದ್ದ ವೆಸ್ಟ್ ಇಂಡೀಸ್ ತಂಡ ತನ್ನ ಅತ್ಯುತ್ತಮ ಪ್ರದರ್ಶನದ ಮೂಲಕ ಫೈನಲ್ ತಲುಪಿತು. ಇನ್ನು ಕೆರಿಬಿಯನ್ನರಿಗೆ ಪ್ರಶಸ್ತಿ ಸುತ್ತಿನಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಎದುರಾಗಿತ್ತಾದರೂ, ವಿಂಡೀಸ್ ತಂಡ 92 ರನ್‍ಗಳ ಬೃಹತ್ ಅಂತರದೊಂದಿಗೆ ಗೆಲವು ದಾಖಲಿಸಿತು.

ಈ ಮೂಲಕ ತಂಡದ ನಾಯಕ ಕ್ಲೈವ್ ಲಾಯ್ಡ್ ಎರಡನೇ ಬಾರಿಗೆ ವಿಶ್ವಕಪ್ ಟ್ರೋಪಿsಯನ್ನು ಎತ್ತಿ ಹಿಡಿದರು. ಈ ಟೂರ್ನಿಯಲ್ಲಿ ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪರಿಚಯಿಸಿರಲಿಲ್ಲ. ಈ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆದಿದ್ದವು. ವೆಸ್ಟ್ ಇಂಡೀಸ್‍ನ ಗೋರ್ಡನ್ ಗ್ರಿನಿಡ್ಜ್ (253) ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರನಾದರೆ, ಮೈಕ್ ಹೆಂಡ್ರಿಕ್ (10) ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದರು.

SCROLL FOR NEXT