ಸರಿತಾ ದೇವಿ ಮತ್ತು ರಾಹುಲ್ ದ್ರಾವೀಡ್ 
ಕ್ರೀಡೆ

ಸರಿತಾ ದೇವಿ ಮಾಡಿದ್ದು ಸರಿಯಲ್ಲ: ರಾಹುಲ್ ದ್ರಾವೀಡ್

ಬಾಕ್ಸರ್ ಸರಿತಾ ದೇವಿ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ತಿರಸ್ಕರಿಸಿದ್ದು ಸರಿಯಾದ ಕ್ರಮವಲ್ಲ...

ನವದೆಹಲಿ: ಬಾಕ್ಸರ್ ಸರಿತಾ ದೇವಿ ಏಷ್ಯನ್ ಗೇಮ್ಸ್‌ನಲ್ಲಿ ಗೆದ್ದಿದ್ದ ಕಂಚಿನ ಪದಕವನ್ನು ತಿರಸ್ಕರಿಸಿದ್ದು ಸರಿಯಾದ ಕ್ರಮವಲ್ಲ ಎಂದು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವೀಡ್ ಹೇಳಿದ್ದಾರೆ.

ಸರಿತಾ ದೇವಿ ವರ್ತನೆಗೆ ನನ್ನ ಬೆಂಬಲವಿಲ್ಲ. ದೇಶಕ್ಕೆ ಬಂದ ಪದಕವನ್ನು ಸರಿತಾ ದೇವಿ ತಿರಸ್ಕರಿಸಬಾರದಿತ್ತು ಎಂದು ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಅಮಾನತುಗೊಂಡಿರುವ ಸರಿತಾ ದೇವಿ ವಿಶ್ವ ಚಾಂಪಿಯನ್‌ಷಿಪ್‌ನಿಂದ ವಂಚಿತರಾಗಿದ್ದಾರೆ. ಸರಿತಾ ದೇವಿ ವರ್ತನೆಯಿಂದ ಆಕೆಯನ್ನು ಅಮಾನತುಗೊಳಿಸಲಾಯಿತು.

ಆದರೆ, ಆಕೆಯ ಅಮಾನತನ್ನು ರದ್ದುಗೊಳಿಸುವಂತೆ ದೇಶದಲ್ಲೆಡೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಗಣ್ಯರು ಒತ್ತಾಯಿಸಿದ್ದರು. ಆದರೆ, ಸರಿತಾ ದೇವಿ ವರ್ತನೆಗೆ ವಿರೋಧ ವ್ಯಕ್ತಪಡಿಸಿರುವ ರಾಹುಲ್ ದ್ರಾವೀಡ್ ಆಕೆಗೆ ಬೆಂಬಲಿಸಲ್ಲ ಎಂದು ಹೇಳಿದ್ದಾರೆ.

ಸೆಮಿಫೈನ್‌ಲ್ಲಿ ಆದ ಘಟನೆಯಿಂದಾಗಿ ಆಕೆಗೆ ತುಂಬಾ ನೋವಾಗಿರುವುದರ ಬಗ್ಗೆ ನಾನು ವಿಷಾಧಿಸುತ್ತೇನೆ. ಆದರೆ 24 ಗಂಟೆಗಳ ನಂತರ ಆಕೆ ತೆಗೆದುಕೊಂಡ ನಿರ್ಧಾರ ಸರಿಯಿರಲಿಲ್ಲ. ಆಕೆ ಆ ರೀತಿ ಪದಕವನ್ನು ತಿರಸ್ಕರಿಸಬಾರದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆಕೆಯ ಜೊತೆಗೆ ಇನ್ನು ಮೂವರು ಪೋಡೀಯಂನಲ್ಲಿದ್ದಾರೆ ಎಂಬ ಅರಿವಿರಬೇಕಿತ್ತು. ಆದರೆ, ಅದನ್ನು ಲೆಕ್ಕಿಸದೇ ಅವರು ಪದಕವನ್ನು ತಿರಸ್ಕರಿಸಿದ್ದಾರೆ. ಉದ್ದೇಶಪೂರ್ವಕವಾಗಿ ಮಾಡಿಲ್ಲವಾದರೂ, ಆಕೆ ಪದಕ ತಿರಸ್ಕರಿಸದ ಕ್ರಮ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಇಂಚಿಯಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಬಾಕ್ಸಿಂಗ್ ಸೆಮಿಫೈನಲ್‌ನಲ್ಲಿ ಕೊರಿಯಾದ ಸ್ಪರ್ಧಿಯ ವಿರುದ್ದ ಸೋತ ಸರಿತಾ ದೇವಿ ತೀರ್ಪು ನೀಡುವಲ್ಲಿ ನಿರ್ಣಾಯಕರು ಪ್ರಮಾದವೆಸಗಿದರು ಎಂದು ಆರೋಪಿಸಿ ಪೋಡಿಯಂನಲ್ಲಿ ಪದಕವನ್ನು ನಿರಾಕಸಿದ್ದರು. 60 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದಿದ್ದ ಸರಿತಾ ದೇವಿ, ಪದಕ ಪ್ರದಾನದ ವೇಳೆ ಬೆಳ್ಳಿ ಪದಕ ಗೆದಿದ್ದ ದಕ್ಷಿಣ ಕೊರಿಯಾದ ಪಾರ್ಕ್ ಜಿ-ನಾ ಅವರಿಗೆ ಪದಕ ಹಿಂದಿರುಗಿಸಿ ಸಂಘಟಕರಿಗೆ ಮುಜುಗರವನ್ನುಂಟು ಮಾಡಿದ್ದರು.

ಸರಿತಾ ದೇವಿ ಸೇರಿದಂತೆ ಮೂವರು ತರಬೇತುದಾರರನ್ನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಅನಿರ್ಧಿಷ್ಟ ಅವಧಿಗೆ ಅಮಾನತುಗೊಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel