ರೋಹನ್ ಬೋಪಣ್ಣ ಮತ್ತು ಮಹೇಶ್ ಭೂಪತಿ 
ಕ್ರೀಡೆ

ಬೋಪಣ್ಣಗೆ ಸಿಹಿ ಭೂಪತಿಗೆ ಕಹಿ

ಕರ್ನಾಟಕದ ಟೆನಿಸ್ ತಾರೆ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‍ನಲ್ಲಿ ಗೆಲವಿನ ಶುಭಾರಂಭ ಮಾಡಿದ್ದಾರೆ

ನವದೆಹಲಿ: ಕರ್ನಾಟಕದ ಟೆನಿಸ್ ತಾರೆ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್‍ನಲ್ಲಿ ಗೆಲವಿನ ಶುಭಾರಂಭ ಮಾಡಿದ್ದಾರೆ. ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು, ತಮ್ಮ ಜೊತೆಗಾರ ಕೆನಡಾದ ಡೇನಿಯಲ್ ನೆಸ್ಟರ್ ಜೊತೆಗೂಡಿ, ಎದುರಾಳಿಗಳಾದ ಸಿಪ್ರಸ್‍ನ ಮಾರ್ಕೋಸ್ ಬಾಗ್ದಾದೀಸ್ ಹಾಗೂ ಆಸ್ಟ್ರೇಲಿಯಾದ ಮಾರಿಂಕೊ ಮ್ಯಾಟೊಸೆವಿಕ್ ವಿರುದ್ಧ 7-6 (7-2), 7-5 ಅಂತರದಲ್ಲಿ ಜಯ ಸಾಧಿಸಿದರು.
ಆದರೆ, ಭಾರತದ ಮಹೇಶ್ ಭೂಪತಿ- ಆಸ್ಟ್ರಿಯಾದ ಜುರ್ಗನ್ ಮೆಲ್ಜರ್ ಜೋಡಿ, ಅರ್ಜೆಂಟೈನಾದ ಜೋಡಿಯಾದ  ಡಿಗೊ ಶೆವಟ್ರ್ ಸಮನ್ - ಹೊರಾಸಿಯೊ ಜೆಬಲ್ಲೋಸ್ ಜೋಡಿ ವಿರುದ್ಧ 4-6, 3-6 ಅಂತರದಲ್ಲಿ ಪರಾಭವ ಹೊಂದಿತು.

ಸೆರೆನಾ, ಜೊಕೊವಿಚ್‍ಗೆ ಜಯ: ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಚ್ ತಮ್ಮ ಎದುರಾಳಿ ರಷ್ಯಾದ ಕುಜ್ನೆಸ್ಟೋವ್ ವಿರುದ್ಧ 6-0, 6-1, 6-4 ಸೆಟ್‍ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆರೆನಾ ವಿಲಿಯಂಸ್ ತಮ್ಮ ಎದುರಾಳಿ ರಷ್ಯಾದ ಜ್ವೊನರೆವಾ ವಿರುದ್ಧ 7-5, 6-0 ಸೆಟ್‍ಗಳಅಂತರದಲ್ಲಿ ಜಯ ಸಾಧಿಸಿದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್