ರೋಜರ್ ಫೆಡರರ್ 
ಕ್ರೀಡೆ

ಫೆಡರರ್‍ಗೆ ಶಾಕ್!

ಇಟೆಲಿಯ ಆಟಗಾರ ಆನ್ದ್ರೆಸ್ಸ್ ಸೆಪ್ಪಿಗೆ ಇದೊಂದು ಮರೆಯಾಲಾಗದ ಪಂದ್ಯ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ ನಡೆದ...

ಮೆಲ್ಬರ್ನ್ : ಇಟೆಲಿಯ ಆಟಗಾರ ಆನ್ದ್ರೆಸ್ಸ್  ಸೆಪ್ಪಿಗೆ ಇದೊಂದು ಮರೆಯಾಲಾಗದ ಪಂದ್ಯ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಅವರು ಜಯಗಳಿಸಿ 4ನೇ ಸುತ್ತಿಗೆ ಪದಾರ್ಪಣೆ ಮಾಡಿದರು.
ವಿಶ್ವದ 2ನೇ ಶ್ರೇಯಾಂಕಿತ  ಆಟಗಾರ ರೋಜರ್ ಫೆಡರರ್ ಅವರನ್ನು 4-6, 6-7 (5-7), 6-4, 6-7 (5-7) ಸೆಟ್ ಗಳಲ್ಲಿ ಮಣಿಸುವ ಮೂಲಕ ಸ್ವಿರ್ಡರ್ಲೆಂಡ್ ಆಟಗಾರನಿಗೆ ಶಾಕ್ ನೀಡಿದರು. ಕಳೆದ ಬಾರಿಯ ಆಸ್ಟ್ರೇಲಿಯನ್ ಓಪನ್‍ನಲ್ಲಿ ಸೆಮಿ ಫೈನಲ್‍ವರೆಗೆ ಪ್ರಯಾಣ ಬೆಳೆಸಿದ್ದ  ಫೆಡರರ್, ಈಗ 3ನೇ ಸುತ್ತಿನಲ್ಲೇ ಗಂಟುಮೂಟೆ ಕಟ್ಟುವಂತಾಯಿತು.

ಡಿಮಿಟ್ರೊವ್ ವೀರಾವೇಶ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಡೆದ ಸಿಪ್ರಸ್‍ನ ಮಾರ್ಕೋಸ್ ಬಾಗ್ದಾದೀಸ್, ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೊವ್ ನಡುವಿನ ಪಂದ್ಯ ತೀವ್ರ ಕುತೂಹಲಭರಿತವಾಗಿತ್ತು. ಇಬ್ಬರೂ ಮದಗಜಗಳಂತೆ ಕಾದಾಡಿದರೂ, ಅಂತಿಮವಾಗಿ ಡಿಮಿಟ್ರೋವ್ ಈ ಸಮರದಲ್ಲಿ 4-6, 6-3, 3-6, 6-3, 6-3 ಸೆಟ್‍ಗಳಲ್ಲಿ ಗೆಲವು ಸಾ„ಸಿದರು. ಅತ್ತ, ಬಾಗ್ದಾದೀಸ್ ಅವರ ಆಟವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.ಮರ್ರೆ, ನಡಾಲ್, ಬೆರ್ಡಿಚ್ ಮುನ್ನಡೆ: ಬ್ರಿಟನ್‍ನ ಆಂಡಿ ಮರ್ರೆ ಅವರು, ಪೊರ್ಚುಗಲ್‍ನ ಜೊವಾವೊ ಸೌಸಾ ವಿರುದಟಛಿ 6-1, 6-1, 7-5 ಅಂತರದಲ್ಲಿ ಜಯ ಗಳಿಸಿದರು. ಸ್ಪೇನ್‍ನ ರಾಫಲ್ ನಡಾಲ್, ಇಸ್ರೇಲ್‍ನ ಡ್ಯುಡಿ ಸೆಲಾ ವಿರುದ್ಧ  6-1, 6-0, 7-5 ಸೆಟ್‍ಗಳಲ್ಲಿ ಗೆಲವು ಪಡೆದರು. ಇನ್ನು, ಚೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್, ಸರ್ಬಿಯಾದ ವಿಕ್ಟರ್ ಟ್ರಾಯ್ಕಿ ವಿರುದಟಛಿ 6-4, 6-3, 6-4 ಸೆಟ್‍ಗಳಲ್ಲಿ ಮಣಿಸಿ, 4ನೇ ಸುತ್ತಿಗೆ ಕಾಲಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!