ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ರೇಸ್ ಎಂದೇ ಬಿಂಬಿತವಾಗಿದ್ದ ಲೆಗಸಿ ಪ್ರಾಯೋಜಕತ್ವದ ಬೆಂಗಳೂರು ಡರ್ಬಿ ರೇಸ್‍ನಲ್ಲಿ ಬೋಲ್ಡ್ ಮೆಜೆಸ್ಟಿ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಸೋಮವಾರ ಬೆಂಗಳೂರು ಟರ್ಫ್ ಕ್ಲಬ್‍ನಲ್ಲಿ ನಡೆದ 40ನೇ ಡರ್ಬಿ ರೇಸ್‍ನಲ್ಲಿ ದೇಶದ ವಿವಿಧ ಭಾಗಗಳಿಂದ 9 ರೇಸ್‍ಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ವರ್ಣರಂಜಿತ ರೇಸ್‍ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಬೋಲ್ಡ್ ಮೆಜೆಸ್ಟಿ ಚಾಂಪಿಯನ್ ಆಯಿತು.
ಇನ್ನು ಬೋಲ್ಡ್ ಮೆಜೆಸ್ಟಿ ಕುದುರೆಯ ಮಾಲೀಕರಾದ ಎಂ.ಎ.ಎಂ ರಾಮಸ್ವಾಮಿ ಅವರು ರು1.57 ಕೋಟಿ ಬಹುಮಾನ ಪಡೆದರು. ನಂತರ ಮಾತನಾಡಿದ ಬೆಂಗಳೂರರು ಟರ್ಫ್ ಅಧ್ಯಕ್ಷ ವಿ ಹರಿಮೋಹನ್ ನಾಯ್ಡು, ಈ ಬಾರಿಯ ಚಳಿಗಾಲದ ಡರ್ಬಿ ರೇಸ್ ಯಶಸ್ವಿಯಾಗಿದ್ದಕ್ಕೆ ಲೆಗಸಿ ಹಾಗೂ ಬಿಟಿಸಿಯ ಎಲ್ಲಾ ಪದಾಧಿಕಾರಿಗಳಿಗೂ ಧನ್ಯವಾದ ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲೂ ಈ ರೀತಿಯಾದ ರೇಸ್‍ಗಳನ್ನು ಆಯೋಜಿಸಲಿ ಎಂದು ಆಶಿಸುತ್ತೇನೆ ಎಂದರು.