ಬ್ರೆಜಿಲ್‍ನ ತಮ್ಮ ಜೊತೆಗಾತಿ ಬ್ರುನೊ ಸೋರ್ಸ್ ಜೊತೆಗೆ ಅಮೇರಿಕಾ-ಮೆಕ್ಸಿಕೊ ಜೋಡಿಯಾದ ಅಬಿಗೈಲ್ ಸ್ಪಿಯರ್ಸ್ ಹಾಗೂ ಸ್ಯಾಂಟಿಯಾಗೊ ಗೊಲ್ಜಾಲೆಜ್ ಜೋಡಿ ವಿರುದ್ಧ ಸೆಣಸಿದ ಸಾನಿಯಾ, ಮಿಶ್ರ ಡಬಲ್ಸ್ ಪಂದ್ಯದಲ್ಲಿ 7-5, 6-7(3-7), 10-8 ಸೆಟ್ ಗಳಲ್ಲಿ ಜಯ ಸಾಧಿಸಿದರು.
ಇದೇ ವಿಭಾಗದ ಮತ್ತೊಂದು ಪಂದ್ಯದಲ್ಲಿ ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ಹಿಂಗಿಸ್ (ಸ್ವಿರ್ಡರ್ಲೆಂಡ್) ಜೋಡಿ, ಸ್ಪೇನ್‍ನ ಜೊತೆಗಾರರಾದ ಮೆರಿನಾ ಗ್ಯಾರಿಗ್ಯುಸ್
ಹಾಗೂ ಪ್ಯಾಬ್ಲೋ ಆ್ಯಂಡ್ಯೂಜರ್ ವಿರುದ್ಧ 6-3, 6-1 , ಸೆಟ್ ಗಳಲ್ಲಿ ಗೆಲವು ಪಡೆದು ಎಂಟರ ಘಟ್ಟಕ್ಕೆ ಕಾಲಿಟ್ಟರು.