ಬೆಂಗಳೂರು: ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‍ಎನ್‍ಎಲ್) ಕರ್ನಾಟಕ ವೃತ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಮಂಡಳಿ ವತಿಯಿಂದ ಅಖಿಲ ಭಾರತ ಬಿಎಸ್‍ಎನ್‍ಎಲ್ ಕೇರಂ ಟೂರ್ನಿ ಬುಧವಾರದಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.
ಬೆಂಗಳೂರು ಟೆಲಿಕಾಂ ಡಿಸ್ಟ್ರಿಕ್ಟ್‍ನ ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್ ಕೆ.ಎಲ್.ಜಯರಾಂ, ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕಬ್ಬನ್ ಪಾರ್ಕ್‍ನಲ್ಲಿರುವ ರಾಜ್ಯ ಸರ್ಕಾರದ ಸೆಕ್ರೆಟರಿಯೇಟ್ ಹಾಲ್‍ನಲ್ಲಿ ಪಂದ್ಯಗಳು ನಡೆಯಲಿದ್ದು, ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ಆತಿಥೇಯ ಕರ್ನಾಟಕ ಅಲ್ಲದೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಎನ್‍ಇ-2, ಎಂಟಿಎನ್ ಎಲ್ ಮುಂಬೈ, ಅಸ್ಸಾಂ, ಕರ್ನಾಟಕ, ಓಡಿಶಾ, ಗುಜರಾತ್ ಎನ್‍ಇ-1 ಮತ್ತು ಯುಪಿ (ಇ) ತಂಡಗಳು ಪಾಲ್ಗೊಳ್ಳಲಿವೆ ಎಂದು ಹೇಳಿದರು.
ಕರ್ನಾಟಕ ತಂಡ ಇಂತಿದೆ:
ಪುರುಷರು- ಬಾಬು ಪ್ರಕಾಶ್, ಫಾರುಖ್, ಎಂ.ಎ. ಕಿತ್ತೂರ್, ಬಿ.ಪಿ. ಪಾಟೀಲ್, ಆರ್. ಎಡ್ವಿನ್, ಜವಾಹರ್ ಕದಮ್.
ಮಹಿಳೆಯರು- ಜಿ. ಭಾರತಿ, ಕೆ.ಎಲ್. ಉಮಾಮಣಿ, ಪಿ.ಕೆ. ಮಂಗಲಾಮಣಿ, ಎಂ.ಡಿ. ಮಾಲಿನಿ, ಟಿ. ಸುಗುಣಾ, ಆರ್.ಎನ್. ಲಲಿತಾ.