ಕ್ರೀಡೆ

ವಿಶ್ವಕಪ್ ಗೆ ಹೊಸ ಆ್ಯಪ್

ವಿಶ್ವಕಪ್ ಸಮೀಪಿಸುತ್ತಿದೆ. ಆದರೆ, ಎಲ್ಲರಿಗೂ ಕ್ರೀಡಾಂಗಣಕ್ಕೆ ಹೋಗಿ ಅಥವಾ ಟಿವಿ ಮುಂದೆ ಕೂತು ಪಂದ್ಯ ಸವಿಯುವ ಅವಕಾಶವಿಲ್ಲ. ಬಹುಪಾಲು ಜನರು ತಮ್ಮ ದೈನಂದಿನ ದಿನಚರಿಗಳನ್ನು ನಿಭಾಯಿಸುತ್ತಲೇ ಕ್ರಿಕೆಟ್ ಸ್ಕೋರ್ ಅಪ್ ಡೇಟ್ ಪಡೆಯಬೇಕಿದೆ.

ಇಂಥ ಪ್ರೇಕ್ಷಕರಿಗಾಗಿ ಐಸಿಸಿ ಹೊಸ ಆ್ಯಪ್ ಬಿಡುಗಡೆ ಮಾಡಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2015 ಆ್ಯಪ್ ಎಂದು ಹೆಸರಿಸಲಾಗಿದೆ. ರಿಲಯನ್ಸ್ ಕಮ್ಯೂನಿಕೇಷನ್ಸ್ ಸಂಸ್ಥೆಯೊಂದಿಗೆ ಸೇರಿ ಅಭಿವೃದ್ಧಿ ಪಡಿಸಲಾದ ಈ ಆ್ಯಪ್ ನಿಂದ ವಿಶ್ವಕಪ್ ನ ಎಲ್ಲಾ ಪಂದ್ಯಗಳ ಲೈವ್ ಸ್ಕೋರ್ ಅನ್ನು ತಿಳಿದುಕೊಳ್ಳಬಹುದು. ಈಗಾಗಲೇ, ಆ್ಯಂಡ್ರಾಯ್ಡ್ ಫೋನ್ ಬಳಕೆದಾರರಿಗೆ ಈ ಆ್ಯಪ್ ಗೂಗಲ್ ಪ್ಲೇನಲ್ಲಿ ಲಭ್ಯವಿದೆ.

ವೈಶಿಷ್ಟ್ಯಗಳು
ಇದೊಂದು ಉಪಯೋಗಿ ಸ್ನೇಹಿ ಮಾಹರಿಯ ಆ್ಯಪ್ ಆಗಿದ್ದು, ಇದರಲ್ಲಿ ವೇಗವಾಗಿ ಸ್ಕೋರ್ ಅಪ್ ಡೇಟ್ ಆಗುತ್ತದೆ ಎಂದು ಐಸಿಸಿ ಹೇಳಿದೆ. ಇಷ್ಟೇ ಅಲ್ಲದೆ, ಬಳಕೆದಾರರು ಆ್ಯಪ್ ನೊಂದಿಗೆ ಲಭ್ಯವಿರುವ ಐಸಿಸಿ ವಿಶ್ವಕಪ್ ಫ್ಯಾಂಟಸಿ ಲೀಗ್ ಆಡಬಹುದು. ತಮ್ಮದೇ ಆದ ಸರ್ವಕಾಲಿಕ ವಿಶ್ವಕಪ್ ಆಟಗಾರರ ತಂಡವನ್ನು ರಚಿಸಬಹುದು. ಅದನ್ನು ಫ್ಯಾಂಟಸಿ ಲೀಗ್ ನಲ್ಲಿ ಆಡಿಸಬಹುದು. ಅಲ್ಲದೆ, ಆ್ಯಪ್ ನಲ್ಲಿ ಸಿಗುವ ವಿಶ್ವಕಪ್ ಕ್ವಿಜ್ ನಲ್ಲೂ ಪಾಲ್ಗೊಳ್ಳಬಹುದು.

SCROLL FOR NEXT