ನವದೆಹಲಿ: ಬಿಸಿಸಿಐ ಚುನಾವಣೆ ಸಂಬಂಧಪಟ್ಟಂತೆ ನಿರ್ದಿಷ್ಟ ಸೂಚನೆಗಳ ಪಟ್ಟಿಯನ್ನು ತಯಾರಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್‍ನಿಂದ ರಚನೆಯಾಗಿರುವ ಮೂವರು ನ್ಯಾಯಮೂರ್ತಿಗಳುಳ್ಳ ಸಮಿತಿ ಬುಧವಾರ ಸಭೆ ನಡೆಸಿತು.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ. ಆರ್.ಎಂ.ಲೋಧಾ, ನ್ಯಾ. ಅಶೋಕ್ ಭಾನ್ ಹಾಗೂ ನ್ಯಾ. ಆರ್.ವಿ.ರವೀಚಂದ್ರನ್ ಪಾಲ್ಗೊಂಡಿದ್ದರು.ಕಳೆದ ಗುರುವಾರ, ಐಪಿಎಲ್ ಪಿsಕ್ಸಿಂಗ್ ಹಗರಣ ಪ್ರಕರಣದ ತೀರ್ಪು ನೀಡಿದ್ದ ಸರ್ವೋಚ್ಛ ನ್ಯಾಯಾಲಯ, ಬಿಸಿಸಿಐ ಅಧ್ಯಕ್ಷ ಪದವಿ ಚುನಾವಣೆಯ ಮೇಲೆ ನಿಗಾ ಇಡಲು, ಚುನಾವಣೆಗೆ ಸಂಬಂ„ಸಿದಂತೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡಲು ಈ ಸಮಿತಿ ನೇಮಿಸಿತ್ತು.
ಬಿಸಿಸಿಐನ ತಪ್ಪುಗಳನ್ನು ಸರಿಪಡಿಸಿ, ಕ್ರಿಕೆಟ್ ಮೇಲೆ ಜನರಿಟ್ಟಿರುವ ವಿಶ್ವಾಸವನ್ನು ಮತ್ತಷ್ಟು ಬಲಗೊಳಿಸುವಂತೆ ಸಮಿತಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೆ, ಐಪಿಎಲ್ ಹಗರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ ನೀಡಬೇಕಾದ ಶಿಕ್ಷೆ ಪ್ರಮಾಣವನ್ನು ನಿಗದಿಗೊಳಿಸುವ ಬಗ್ಗೆ ಸಲಹೆ ನೀಡುವ ಜವಾಬ್ದಾರಿಯನ್ನು ಸಮಿತಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ, ಬುಧವಾರ ಸಭೆ ಸೇರಿದ ಸಮಿತಿ ಸದಸ್ಯರು ಈ ಕುರಿತಂತೆ ಚರ್ಚಿಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಅಧ್ಯಕ್ಷ ನ್ಯಾ. ಆರ್.ಎಂ. ಲೋಧಾ, `ಸಮಿತಿ ರಚನೆಯಾದ ನಂತರ ಇದೇ ಮೊದಲ ಬಾರಿಗೆ ನಾವು ಸಭೆ ಸೇರಿ ಚರ್ಚಿಸಿದ್ದೇವೆ. ಆದರೆ, ನಮಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ದೃಢೀಕೃತ ಪ್ರತಿ ಸಿಕ್ಕಿಲ್ಲ. ಪ್ರತಿ ಸಿಕ್ಕಿದ ನಂತರ ಬಿಸಿಸಿಐ ಬಳಿ ಚರ್ಚೆ ಆರಂಭಿಸಲಿದ್ದೇವೆ ಎಂದು ತಿಳಿಸಿದರು. ಬಿಸಿಸಿಐ ಸಂವಿಧಾನವನ್ನೂ ತಿದ್ದುಪಡಿಗೊಳಪಡಿಸಲು ಸಮಿತಿಯ ಸಭೆಯಲ್ಲಿ ಚರ್ಚಿಸಲಾಯಿತು ಎಂದ ಲೋಧಾ, ಸಮಿತಿಯ ಮುಂದಿನ ಸಭೆ ಫೆಬ್ರವರಿ 2ನೇ ವಾರದಲ್ಲಿ ನಡೆಯಲಿದೆ ಎಂದರು.
ಫೆ16ಕ್ಕೆ ಐಪಿಎಲ್ ಹರಾಜು
2015ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಫೆ.16ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಬಾರಿಯ ಹರಾಜಿನಲ್ಲಿ ಎಷ್ಟು ಜನ ಆಟಗಾರರು ಹರಾಜಿಗೊಳಪಡಲಿದ್ದಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.ಐಪಿಎಲ್ ಫ್ರಾಂಚೈಸಿಗಳು ತಮ್ಮ ತಂಡಗಳಿಂದ ಯಾವ ಆಟಗಾರರನ್ನು ಹೊರಹಾಕಲಿವೆ ಎಂಬುದು ಇನ್ನೂ ನಿಗೂಢವಾಗಿರುವುದೇ ಇಉದಕ್ಕೆ ಕಾರಣ.
ಎಲ್ಲಾ ಫ್ರಾಂಚೈಸಿಗಳು ಫೆ.4 ರೊಳಗೆ ತಮ್ಮಲ್ಲಿನ ಆಟಗರರ ಪರಿಷ್ಕೃತ ಪಟ್ಟಿಯನ್ನು ನೀಡುವಂತೆ ಸೂಚನೆ ನೀಡಲಾಗಿತ್ತು. ಹಾಗಾಗಿ, ಎಷ್ಟು ಆಟಗಾರರು ಹರಾಜಿಗೊಳಪಡುತ್ತಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಆದರೆ, ಯುವರಾಜ್ ಸಿಂಗ್, ಕೆವಿನ್ ಪೀಟರ್ಸನ್, ದಿನೇ ಶ್ ಕಾರ್ತಿಕ್ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಉಪನಾಯಕ ಹಶೀಂ ಆಮ್ಲಾ ಅವರು ಹರಾಜಿಗೊಳಗಾಗುತ್ತಾರೆ ಎನ್ನಲಾಗಿದೆ