ವೆಲ್ಲಿಂಗ್ಟನ್: ಕುಮಾರ ಸಂಗಕ್ಕಾರ ಅವರ ಶತಕದ ನೆರವಿನಿಂದ ಶ್ರೀಲಂಕಾ ತಂಡ, ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ 34 ರನ್‍ಗಳ ಜಯ ಸಂಪಾದಿಸಿತು.
ಈ ಪಂದ್ಯದ ಜಯದ ಹೊರತಾಗಿಯೂ ಸರಣಿಯನ್ನು 4-2 ಅಂತರದಿಂದ ಸೋತ ಲಂಕಾ ತಂಡಕ್ಕೆ ಕೊನೆಯ ಪಂದ್ಯ ಗೆದ್ದಿದ್ದಷ್ಟೇ ಸಮಾಧಾನದ ಸಂಗತಿ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ, 50 ಓವರ್‍ಗಳಲ್ಲಿ 287 ರನ್ ಗಳಿಸಿತ್ತು. ಆನಂತರ ಬ್ಯಾಟಿಂಗ್‍ಗೆ ಇಳಿದ ಕಿವೀಸ್ ಪಡೆ, 45.2 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 253ಕ್ಕೆ
ಶರಣಾಯಿತು.
71 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದಾಗ, ಶ್ರೀಲಂಕಾದ ಇನಿಂಗ್ಸ್ ಜವಾಬ್ದಾರಿ ಹೊತ್ತಿದ್ದ ಸಂಗಕ್ಕಾರ 105 ಎಸೆತಗಳಲ್ಲಿ 113 ರನ್ ದಾಖಲಿಸಿ, ತಂಡ ಉತ್ತಮ ಪೇರಿಸುವಲ್ಲಿ ನೆರವಾದರು. ಸಂಗಕ್ಕಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ವಿಲಿಯಮ್ಸ್ ಸರಣಿ ಶ್ರೇಷ್ಠ ಗೌರವ ಪಡೆದರು.
ಹೊಸ ದಾಖಲೆ
ಈ ಪಂದ್ಯದ ಮೂಲಕ, ಅತಿ ಹೆಚ್ಚು ಬ್ಯಾಟ್ಸ್‍ಮನ್‍ಗಳನ್ನು ಪೆವಿಲಿಯನ್‍ಗೆ ಅಟ್ಟಿದ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಸಂಗಕ್ಕಾರ ಭಾಜನರಾಗಿದ್ದಾರೆ. ಈ ಮೂಲಕ, ಆಸ್ಟ್ರೇಲಿಯಾದ ಆಟಗಾರ ಗಿಲ್ ಕ್ರಿಸ್ಟ್ ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಅಳಿಸಿಹಾಕಿದರು. ಇದೀಗ, ಅತಿ ಹೆಚ್ಚು ವಿಕೆಟ್ ಉರುಳಿಸಿದ ವಿಕೆಟ್ ಕೀಪರ್‍ಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ಸಂಗಕ್ಕಾರ (474) ಇದ್ದರೆ, ಆನಂತರದ ಸ್ಥಾನಗಳಲ್ಲಿ ಗಿಲ್ ಕ್ರಿಸ್ಟ್ (472), ದಕ್ಷಿಣ ಆಪಿs್ರಕಾದ ಮÁರ್ಕ್ ಬೌಚರ್ (424) ಹಾಗೂ ಭಾರತದ ಮಹೇಂದ್ರ ಸಿಂಗ್ ಧೋನಿ (314) ಇದ್ದಾರೆ.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 287 (50 ಓವರ್)
ಸಂಗಕ್ಕಾರ 113, ದಿಲ್ಶಾನ್ 81
ಬೌಲಿಂಗ್: ಆ್ಯಂಡರ್ಸನ್ 59ಕ್ಕೆ 3, ಸೌಥೀ 50ಕ್ಕೆ 2
ನ್ಯೂಜಿಲೆಂಡ್ 45.2 ಓವರ್‍ನಲ್ಲಿ 253ಕ್ಕೆ ಆಲೌಟ್
ವಿಲಿಮ್ಸನ್ 54, ರೊಂಚಿ 47
ಬೌಲಿಂಗ್: ಎರಂಗಾ 34ಕ್ಕೆ 2, ಕುಲಸೇಕರ 55ಕ್ಕೆ 2.