ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಕೆನಡಾದ ಟೆನಿಸ್ ತಾರೆ ಯುಜೆನಿ ಬೌಚರ್ಡ್ ಉಡುಪು ನಿಯಮ ಉಲ್ಲಂಘಿಸಿದ ಆರೋಪಕ್ಕೆ ಸಿಲುಕಿದ್ದಾರೆ. ಟೂರ್ನಿಯ ನಿಯಮದಲ್ಲಿ ಆಟಗಾರ ಅಥವಾ ಆಟಗಾರ್ತಿ ಪಂದ್ಯದ ವೇಳೆ ಅಂಗಣಕ್ಕೆ ಪ್ರವೇಶಿಸಿದ ನಂತರ ಧರಿಸುವ ಅಥವಾ ಬಳಸುವ ಉಡುಪು ಸಂಪೂರ್ಣವಾಗಿ ಬಿಳಿ ಬಣ್ಣದ್ದಾಗಿರಬೇಕು.
ಇತರೆ ಯಾವುದೇ ಬಣ್ಣದ ಉಡುಪನ್ನು ಪ್ರದರ್ಶಿಶುವಂತಿಲ್ಲ ಎಂಬುದು ನಿಯಮ. ಆದರೆ ಬೌಚರ್ಡ್ ಮೊದಲ ಸುತ್ತಿನಲ್ಲಿ ಚೀನಾದ ಆಟಗಾರ್ತಿ ಯಿಂಗ್ ಯಿಂಗ್ ಡೌನ್ ವಿರುದ್ಧ ಪಂದ್ಯದಲ್ಲಿ ಕಪ್ಪು ಬಣ್ಣದ ಬ್ರಾ ಧರಿಸಿದ್ದರು.
ಪಂದ್ಯದ ವೇಳೆ ಅದು ಕಾಣಿಸಿದ್ದೇ ನಿಯಮ ಉಲ್ಲಂಘನೆಯಾಗಿದೆ. ಅಂದ್ಹಾಗೆ ಈ ನಿಯಮ ಉಲ್ಲಂಘನೆಗೆಗಾಗಿ ಬೌಚರ್ಡ್‍ಗೆ ಪಂದ್ಯದ ವೇಳೆ ಅಂಪೈರ್ ಲೂಸಿ ಏಂಜೆಲ್ ಎಚ್ಚರಿಕೆ ನೀಡಿದ್ದು ಬಿಟ್ಟರೆ, ಟೂರ್ನಿ ಸಂಘಟಕರು ಮತ್ತಾವುದೇ ರೀತಿಯ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಡೈಲಿ ಮೇಲ್ ವರದಿ ಮಾಡಿದೆ.