ರಾಫೆಲ್ ನಡಾಲ್ 
ಕ್ರೀಡೆ

102ನೇ ಶ್ರೇಯಾಂಕಿತನ ಮುಂದೆ ಮಂಡಿಯೂರಿದ ರಾಫೆಲ್ ನಡಾಲ್

ಎರಡು ಬಾರಿಯ ಚಾಂಪಿಯನ್‌ ಸ್ಪೇನ್‌ ರಫೆಲ್ ನಡಾಲ್ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್‌ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ...

ಲಂಡನ್: ಎರಡು ಬಾರಿಯ ಚಾಂಪಿಯನ್‌ ಸ್ಪೇನ್‌ ರಫೆಲ್ ನಡಾಲ್ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್‌ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಸತತ ಗಾಯದ ಸಮಸ್ಯೆಗಳಿಂದ ಬಳಲುತ್ತಿರುವ 14 ಗ್ರ್ಯಾನ್ ಸ್ಲಾಮ್‌ಗಳ ಚಾಂಪಿಯನ್ ನಡಾಲ್, ಜರ್ಮನಿಯ ಡಸ್ಟಿನ್ ಬ್ರೌನ್ ಅವರ ವಿರುದ್ಧ ಸೋತು ಮೂರನೇ ಸುತ್ತಿಗೇರಲು ವಿಫಲರಾಗಿದ್ದಾರೆ.

ಎರಡನೇ ಸುತ್ತಿನ ಹಣಾಹಣಿಯಲ್ಲಿ 4 ಸೆಟ್‌ಗಳಿಗೆ ವಿಸ್ತರಿಸಿದರೂ ನಡಾಲ್‌ ಪ್ರದರ್ಶನ ನಿರಾಶಾದಾಯಕವಾಗಿತ್ತು. ಈ ವರ್ಷ ಪದೇ ಪದೆ ಗಾಯಗಳ ಸಮಸ್ಯೆಯಿಂದ ಹೊರಗುಳಿಯುತ್ತಿದ್ದ ನಡಾಲ್‌ಗೆ ಈ ಟೂರ್ನಿಯಲ್ಲಿ 10ನೇ ಶ್ರೇಯಾಂಕ ನೀಡಲಾಗಿತ್ತು. ಆದರೆ ಅವರು ವಿಶ್ವದಲ್ಲಿ 102ನೇ ಶ್ರೇಯಾಂಕ ಹೊಂದಿರುವ ಡಸ್ಟಿನ್ ಬ್ರೌನ್ ಅವರ ಮುಂದೆ 7-5, 3-6, 6-4, 6-4 ಅಂತರದಿಂದ ಸೋತಿದ್ದು ಕೌತುಕಕ್ಕೆ ಕಾರಣವಾಗಿದೆ.

ಬ್ರೌನ್ ಅವರು ನಡಾಲ್‌ ಅವರನ್ನು ಮಣಿಸಿದ್ದು ಎರಡನೇ ಸಲ. ಕಳೆದ ವರ್ಷ ನಡಾಲ್‌
ಅವರನ್ನು ಸೋಲಿಸಿದ್ದರು. ಬ್ರೌನ್ ಆರಂಭಿಕ ಪಂದ್ಯದಲ್ಲಿ ಚೀನಾ ತೈಪೆಯ ಯೆನ್ ಸುನ್ ಲು ವಿರುದ್ಧ (3-6, 6-3, 7-5, 6-4) ಗೆದ್ದು ಎರಡನೇ ಸುತ್ತಿಗೆ ತಲುಪಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT