ಹಾಕಿ: ಒಲಿಂಪಿಕ್ಸ್ ನಿಂದ ಹೊರಬಿದ್ದ ಪಾಕಿಸ್ತಾನ
ಐರ್ಲೆಂಡ್ ವಿರುದ್ಧ ಆಘಾತಕಾರಿ ಫಲಿತಾಂಶ ಕಂಡ ಪಾಕಿಸ್ತಾನ ಪುರುಷರ ಹಾಕಿ ತಂಡ ಮುಂದಿನ ವರ್ಷ ಬ್ರೆಜಿಲ್ ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್....
ಆಂಟ್ವೆರ್ಪ್ (ಬೆಲ್ಜಿಯಂ): ಐರ್ಲೆಂಡ್ ವಿರುದ್ಧ ಆಘಾತಕಾರಿ ಫಲಿತಾಂಶ ಕಂಡ ಪಾಕಿಸ್ತಾನ ಪುರುಷರ ಹಾಕಿ ತಂಡ ಮುಂದಿನ ವರ್ಷ ಬ್ರೆಜಿಲ್ ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕೂಟದಿಂದ ಹೊರಬಿದ್ದಿದೆ. ಇಲ್ಲಿ ನಡೆಯುತ್ತಿರೋ ವಿಶ್ವ ಹಾಕಿ ಸೆಮಿಫೈನಲ್ ಲೀಗ್ ಪಂದ್ಯಾವಳಿಯಲ್ಲಿನ ಇಂದಿನ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ 0-1 ಗೋಲಿನಿಂದ ಐರ್ಲೆಂಡ್ ವಿರುದ್ಧ ಸೋಲನುಭವಿಸಿ ತತ್ತರಿಸಿತು.
ಇಂದು ನಡೆದ 5-9 ನೇ ಸ್ಥಾನಕ್ಕಾಗಿ ನ ಪ್ಲೇ-ಆಪ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಐರ್ಲೆಂಡ್ ಆಘಾತ ನೀಡಿತು. ಇದರಿಂದಾಗಿ ಟೂರ್ನಿಯಲ್ಲಿ ಅದು 7ನೇ ಸ್ಥಾನಕ್ಕೆ ಮುಂಚಿನ ಸ್ಥಾನ ಅಲಂಕರಿಸುವುದು ಕಷ್ಟ ಸಾಧ್ಯವಾಗಿದೆ. ಇಂಚಾನ್ ಏಷ್ಯನ್ ಗೇಮ್ಸ್ ನಲ್ಲಿ ಸ್ಥಾನ ಗಳಿಸಲು ಪಾಕಿಸ್ತಾನಕ್ಕೆ ಈ ವಿಶ್ವ ಸೆಮಿಫೈನಲ್ ಲೀಗ್ ನಿರ್ಣಾಯಕವಾಗಿತ್ತು. ಆದರೆ ಭಾರತ ಒಲಿಂಪಿಕ್ಸ್ ಕೂಟದಲ್ಲಿ ಮೂರು ಭಾರಿ ಚಿನ್ನದ ಪದಕ ಗೆದ್ದ ಏಕೈಕ ತಂಡವೆನಿಸಿದ್ದ ಪಾಕಿಸ್ತಾನದ ನಿರ್ಗಮನ ವಿಶ್ವ ಹಾಕಿ ಪಂಡಿತರನ್ನು ದಿಗ್ಬ್ರಮೆಗೊಳಿಸಿದೆ.