ಜಿಂಬಾಂಬ್ವೆ ಸರಣಿಯಿಂದ ಹೊರಗುಳಿದಿರುವ ಭಾರತ ತಂಡದ ಹಿರಿಯ ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಸಹ ಇದ್ದು ತಮ್ಮ ಗೆಳತಿ ಅನುಷ್ಕಾ ಶರ್ಮಾ ಅವರೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ ತಾವು ಪೂಲ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣ ಇಸ್ಟಾಗ್ರಾಮ್ ನಲ್ಲಿ ಆಪ್ ಲೋಡ್ ಮಾಡಿದ್ದರು. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದ ಲಾಡ್ಜ್ ಒಂದರಲ್ಲಿದ್ದಾರೆ ಎಂದು ಹೇಳಲಾಗಿದ್ದು ಅನುಷ್ಕಾ ಶರ್ಮಾ ಸಹ ವಿರಾಟ್ ಕೊಹ್ಲಿ ಅವರೊಂದಿಗೆ ದಕ್ಷಿಣ ಆಫ್ರಿಕಾಗೆ ತೆರಳಿದ್ದಾರೆ ಎಂಬ ಸುದ್ದಿ ಹರಡಿದೆ.
ವಿರಾಟ್ ಕೊಹ್ಲಿ ಫೋಟೊ ಆಪ್ ಲೋಡ್ ಆಗಿದ್ದ ಪೋಸ್ಟ್ ಗೆ ಆ ಲಾಡ್ಜ್ ನ ಷೆಫ್ ಒಬ್ಬ ಕಾಮೆಂಟ್ ಮಾಡಿದ್ದು, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ದಕ್ಷಿಣ ಆಫ್ರಿಕಾಗೆ ಬಂದದ್ದರಿಂದ ಅತ್ಯಂತ ಸಂತಸವಾಗಿದೆ. ಶೀಘ್ರವೇ ಮತ್ತೊಮ್ಮೆ ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿ ಎಂದು ಕಾಮೆಂಟಿಸಿದ್ದಾರೆ.