ಸೆರೆನಾ ವಿಲಿಯಂ ಸೋದರಿಯರ ಮುಖಾಮುಖಿ
ಟೆನಿಸ್ ಲೋಕದ ಸಹೋದರಿಯರಾದ ಸೆರೆನಾ ವಿಲಿಯಮ್ಸ್ ಹಾಗೂ ವೀನಸ್ ವಿಲಿಯಮ್ ಇಬ್ಬರು ಇಂದು ನಡೆಯಲಿರುವ ವಿಂಬಲ್ಡನ್ ಮಹಿಳೆಯರ...
ಟೆನಿಸ್ ಲೋಕದ ಸಹೋದರಿಯರಾದ ಸೆರೆನಾ ವಿಲಿಯಮ್ಸ್ ಹಾಗೂ ವೀನಸ್ ವಿಲಿಯಮ್ ಇಬ್ಬರು ಇಂದು ನಡೆಯಲಿರುವ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ವಿಭಾಗದ 4ನೇ ಸುತ್ತಿನಲ್ಲಿ ಮುಖಾಮುಖಿಯಾಗಲಿದ್ದಾರೆ.
ಟೆನಿಸ್ ಅಂಕಣಗಳಲ್ಲಿ ಈ ಇಬ್ಬರೂ ಸಹೋದರಿಯರದ್ದೂ ಒಟ್ಟು 26ನೇ ಮುಖಾಮುಖಿ. ವಿಂಬಲ್ಡನ್ ನಲ್ಲಿ ಇಬ್ಬರು ಹೀಗೆ ಎದುರುಬದುರಾಗುತ್ತಿರುವುದು ಇದು 6ನೇ ಬಾರಿ. 1998ರಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ 2ನೇ ಸುತ್ತಿನ ಪಂದ್ಯದಲ್ಲಿ ಈ ಇಬ್ಬರೂ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು.
ಈ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿರುವ ವೀನಸ್ ವಿಲಿಯಮ್ ನಾನು ಹಾಗೂ ಸೆರೆನಾ ಇಬ್ಬರೂ ಪಂದ್ಯವನ್ನಾಡುವಾಗ ಅಕ್ಕ ತಂಗಿ ಎಂಬುದನ್ನು ಮರೆತು ಹಾಡುತ್ತೇವೆ. ಕೇವಲ ಕ್ರೀಡೆಯ ದೃಷ್ಟಿಕೋನದಲ್ಲೇ ನಾನು ಪ್ರದರ್ಶನ ನೀಡುತ್ತೇನೆ. ಯಾರು ಗೆದ್ದರೂ, ಯಾರು ಸೋತರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿರುವುದಾಗಿ ಹಫಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.