ಮಹೇಂದ್ರ ಸಿಂಗ್ ಧೋನಿ 
ಕ್ರೀಡೆ

ಧೋನಿಗೆ 34ನೇ ವಸಂತ

ಭಾರತ ಏಕದಿನ ಹಾಗೂ ಟಿ-20 ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಂಗಳವಾರ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.,,,

ನವದೆಹಲಿ: ಭಾರತ ಏಕದಿನ ಹಾಗೂ ಟಿ-20 ತಂಡದ ನಾಯಕ ಮಹೇಂದ್ರ ಸಿಂಗ್  ಧೋನಿ ಮಂಗಳವಾರ 34ನೇ  ವರ್ಷಕ್ಕೆ ಕಾಲಿಟ್ಟಿದ್ದಾರೆ.

ಜುಲೈ 7, 1981ರಲ್ಲಿ ಜಾರ್ಖಂಡ್‍ನ ರಾಂಚಿಯಲ್ಲಿ  ಜನಿಸಿದ ಧೋನಿಗೆ ಅಪ್ಪನಾದ ಬಳಿಕ ಬರುತ್ತಿರುವ ಮೊಟ್ಟಮೊದಲ ಹುಟ್ಟುಹಬ್ಬವಿದು ಎಂಬುದು ವಿಶೇಷ ಎಂದು ದಿ ಟೈ ಮ್ಸ್ ಆಫ್  ಇಂಡಿಯಾ ವರದಿ ಮಾಡಿದೆ. ಶಾಲಾ ದಿನಗಳಲ್ಲಿ ಗೋಲ್‍ಕೀಪರ್ ಆಗಿದ್ದ ಧೋನಿ
ಕ್ರಮೇಣ ವಿಕೆಟ್‍ಕೀಪಿಂಗ್‍ನತ್ತ ಲಕ್ಷ್ಯ ಹರಿಸಿದರು. ಬಿಹಾರ ಪರ ತನ್ನ 18ರ ಹರೆಯದಲ್ಲಿ 1999-2000ನೇ ಸಾಲಿಗೆ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿದ ಧೋನಿ, 2004ರ ಡಿಸೆಂಬರ್ 23ರಂದು ಚಿತ್ತಗಾಂಗ್‍ನಲ್ಲಿ ಬಾಂಗ್ಲಾದೇಶ ವಿರುದ್ಧ  ಪ್ರಥಮ ಏಕದಿನ ಪಂದ್ಯವನ್ನಾಡಿದರು. ಆದರೆ ಮೊದಲ ಎಸೆತದಲ್ಲೇ ರನೌಟ್ ಆದ ಧೋನಿ ನಿರಾಸೆ ಅನುಭವಿಸಿದ್ದರು.

 ಇನ್ನು 2005ರ ಡಿಸೆಂಬರ್‍ನಲ್ಲಿ ಶ್ರೀಲಂಕಾ ವಿರುದ್ಧ  ಟೆಸ್ಟ್ ಬದುಕಿಗೆ ಕಾಲಿರಿಸಿದ ಧೋನಿ ಎರಡು ವರ್ಷಗಳ ಬಳಿಕ ರಾಹುಲ್ ದ್ರಾವಿಡ್ ಅವರಿಂದ ತೆರವಾದ ಭಾರತ ತಂಡದ ನಾಯಕನ ಸ್ಥಾನವನ್ನು ಅಲಂಕರಿಸಿದರು. ನಾಯಕತ್ವ ಹೊತ್ತುಕೊಂಡ ಬೆನ್ನಲ್ಲ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ಪ್ರವಾಸ ಕೈಗೊಂಡು ಮೊಟ್ಟಮೊದಲ ಬಾರಿಗೆ ದ್ವಿಪಕ್ಷೀಯ ಸರಣಿ ವಿಜಯದತ್ತ ತಂಡವನ್ನು ಮುನ್ನಡೆಸಿದ ಧೋನಿ ಆನಂತರ ಮುಟ್ಟಿದ್ದೆಲ್ಲಾ ಚಿನ್ನವಾಯಿತು.

2007-08ರ ಸಿಬಿ ಸರಣಿ, 2007ರ ಐಸಿಸಿ ವಿಶ್ವ ಟಿ-20 ಚಾಂಪಿಯನ್‍ಶಿಪ್, 2013ರ ಐಸಿಸಿ ವಿಶ್ವ ಏಕದಿನ ಕ್ರಿಕೆಟ್ ಚಾಂಪಿಯನ್‍ಶಿಪ್ ಹಾಗೂ ಇದೇ ಸಾಲಿನ ಐಸಿಸಿ ಚಾಂಪಿಯನ್ ಟ್ರೋಫಿಯನ್ನು ಭಾರತಕ್ಕೆ ತಂದುಕೊಟ್ಟರು. ಮಾತ್ರವಲ್ಲದೆ, 2009ರ ಡಿಸೆಂಬರ್‍ನಿಂದ ಸತತ 18 ತಿಂಗಳುಗಳ ಕಾಲ ಭಾರತ ಐಸಿಸಿ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ನಂ.1 ಸ್ಥಾನದಲ್ಲಿ ಮುನ್ನಡೆಯುವಂತೆಯೂ ಶ್ರಮಿಸಿದ್ದರು. ಕಳೆದ ವರ್ಷಾಂತ್ಯದಲ್ಲಿ ಟೆಸ್ಟ್ ನಾಯಕತ್ವದಿಂದ ದೂರ ಸರಿದ ಧೋನಿ, ಏಕದಿನ ಹಾಗೂ ಟಿ-20 ಮಾದರಿಯಲ್ಲಿ ಭಾರತ ತಂಡದ ನಾಯಕನಾಗಿ ಮುಂದುವರೆದಿದ್ದಾರೆ. ಭಾರತ ಕಂಡ ಶ್ರೇಷ್ಠ ನಾಯಕ ಧೋನಿಗೆ ನಿವೃತ್ತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಅಜಿಂಕ್ಯ ರಹಾನೆ ಸೇರಿದಂತೆ ಇನ್ನೂ ಅನೇಕ ಪ್ರಮುಖರು ಶುಭ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!