ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿರುವ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಟರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಜೋಡಿ ಮಹಿಳೆಯರ ಡಬಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾನಿಯಾ-ಹಿಂಗೀಸ್ ಜೋಡಿ ಕೇವಲ ಒಂದು ಗಂಟೆ ಹತ್ತೊಂಬತ್ತು ನಿಮಿಷದಲ್ಲಿ ಒಂಬತ್ತನೇ ಶ್ರೇಯಾಂಕ ಹೊಂದಿದ್ದ ಆಸ್ಟ್ರೇಲಿಯಾ-ಕಜಕಿಸ್ತಾನದ ಜೋಡಿಯಾದ ಕ್ಯಾಸಿ ಡೆಲ್ಲಸ್ಕ್ವಾಹಾಗೂ ಯರೊಸ್ಲವಾ ಶೆಡೊವಾ ಅವರನ್ನು 7-5, 6-3 ಅಂತರದಿಂದ ಮಣಿಸಿದೆ.
ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಹಾಗೂ ಹಿಂಗಿಸ್ ಜೋಡಿ ಐದನೇ ಶ್ರೇಯಾಂಕಿತ ಅಮೆರಿಕದ ರಾಕ್ವೆಲ್ ಕೊಪ್ಸ್ ಹಾಗೂ ಅಬಿಗೆಲ್ ಸ್ಪಿಯರ್ಸ್ ಜತೆ ಶುಕ್ರವಾರ ಸೆಣಸಲಿದ್ದು, ವಿಜೇತ ಜೋಡಿ ಫೈನಲ್ ಪ್ರವೇಶ ಗಿಟ್ಟಿಸಲಿದೆ.