ಟೀಂ ಇಂಡಿಯಾ ತಂಡ 
ಕ್ರೀಡೆ

ಗೆಲುವಿನ ಲಯಕ್ಕೆ ಮರಳಿದ ಟೀಂ ಇಂಡಿಯಾ

ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 255 ರನ್ ಗಳನ್ನು ಗಳಿಸಿದೆ. ಅಂಬಟಿ ರಾಯುಡು ಅವರ ಶತಕ ನೆರವಿನೊಂದಿಗೆ...

ಹರಾರೆ: ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ರನ್ ಗಳಿಂದ ರೋಚಕ ಜಯ ಗಳಿಸಿದೆ.

ಜಿಂಬಾಬ್ವೆಯ ಹರಾರೆ ಸ್ಪೋರ್ಟ್ ಕ್ಲಬ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 255 ರನ್ ಗಳನ್ನು ದಾಖಲಿಸಿತು.

256 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಜಿಂಬಾಬ್ವೆ ನಿಗದಿತ ಓವರ್ ನಲ್ಲಿ 251 ರನ್ ಗಳಿಸಲಷ್ಟೇ ಶಕ್ಯವಾಯಿತು. ಪಂದ್ಯದ ಕೊನೆಯ ಎಸೆತದವರೆಗೂ ಜಿಂಬಾಬ್ವೆ ಪಂದ್ಯ ಗೆಲ್ಲುವ ನಿರೀಕ್ಷೆ ದಟ್ಟವಾಗಿತ್ತು. ಆದರೆ ಕೊನೆಯ ಓವರ್ ನಲ್ಲಿ ಜಿಂಬಾಬ್ವೆಗೆ ಗೆಲ್ಲಲು 10 ರನ್ ಬೇಕಿತ್ತು. ಈ ವೇಳೆ ಓವರ್ ಮಾಡಿದ ಭುವನೇಶ್ವರ್ ಕೇವಲ 5 ರನ್ ಗಳನ್ನು ನೀಡುವ ಮೂಲಕ ತಂಡಕ್ಕೆ ಗೆಲವು ತಂದು ಕೊಟ್ಟರು.

ಜಿಂಬಾಬ್ವೆಯ ಆಟಗಾರ ಚಿಗುಂಬುರಾ ಅಜೇಯ 104 ರನ್ ಗಳನ್ನು ಗಳಿಸಿದ್ದು, ತಂಡವನ್ನು ಗೆಲುವಿನ ದಡ ಸೇರಿಸಲುಶತಪ್ರಯತ್ನ ಮಾಡಿದರು ಆದರೆ ಇದಕ್ಕೆ ಅಡ್ಡಿ ಮಾಡಿದ್ದು ಟೀಂ ಇಂಡಿಯಾ ಬೌಲರ್ ಗಳು. ತಂಡ ಕಡಿಮೆಮೊತ್ತ ಸಾಧಿಸಿದರು, ದಿಟ್ಟ ಬೌಲಿಂಗ್ ಮಾಡಿ ತಂಡಕ್ಕೆ ಜಯ ಸಿಗುವಂತೆಮಾಡಿದ್ದಾರೆ. ಸ್ಟುವರ್ಟ್ ಬಿನ್ನಿ, ಅಕ್ಷರ ಪಟೇಲ್ ತಲಾ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಕುಲಕರ್ಣಿ ತಲಾ 1 ವಿಕೆಟ್ ಪಡೆದಿದ್ದಾರೆ. 

ಜಿಂಬಾಬ್ವೆ ಪರ ವುಸಿ ಸಿಬಾಂಡ 20, ಚಿಭಾಭಾ 3, ಮಸಕಾಜ 34, ಸೀನ್ವಿಲಿಯಮ್ಸ್ 0, ಸಿಕಂದರ್ ರಾಜಾ 37, ಮುಟುಂಬಾಮಿ7 ಹಾಗೂ ಗ್ರೇಮ್ ಕ್ರೆಮರ್ 27 ರನ್ಗಳಿಸಿದ್ದಾರೆ.

ಭಾರತ ಪರ ಮುರಳಿ ವಿಜಯ್ 1, ಅಂಜಿಕ್ಯಾ ರಹಾನೆ 34, ಅಂಬಟಿ ರಾಯುಡು ಅಜೇಯ 124, ಮನೀಷ್ ತಿವಾರಿ 2 , ರಾಬಿನ್ ಉತ್ತಪ್ಪ 0, ಸ್ಟುವರ್ಟ್ ಬಿನ್ನಿ 77 ಹಾಗೂ  ಅಕ್ಷರ ಪಟೇಲ್ 2 ರನ್ಗಳಿಸಿದ್ದಾರೆ.

ಜಿಂಬಾಬ್ವೆ ಪರ ತಿರಿಪನೋ, ಚಿಬಾಬಾ ತಲಾ 2 ವಿಕೆಟ್ ಪಡೆದರೆ, ವಿಟೋರಿ1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್