ಲಂಡನ್: ಫಿಫಾದ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ಚಕ್ ಬ್ಲೇಜರ್ ವಿವಿಧ ಕಾನೂನುಬಾಹಿರ ಚಟುವಟಿಕೆಯನ್ನು ನಡೆಸಿರುವ ಆರೋಪದ ಅಡಿಯಲ್ಲಿ ಫಿಫಾ ಸಂಸ್ಥೆಯಿಂದ ಆಜೀವ ನಿಷೇಧಕ್ಕೆ ಗುರಿಯಾಗಿದ್ದಾರೆ.
ಅಮೆರಿಕ ತನಿಖಾ ಸಂಸ್ಥೆ ವಿಚಾರಣೆ ನಡೆಸುತ್ತಿರುವ ಫಿಫಾದ ಇತ್ತೀಚಿನ ಹಗರಣಗಳಲ್ಲಿ ಚಕ್ ಬ್ಲೇಜರ್ ಪ್ರಮುಖ ವ್ಯಕ್ತಿಯಾಗಿದ್ದರು.ಈ ಹಿನ್ನೆಲೆಯಲ್ಲಿ ಗುರುವಾರ ವಿಶ್ವ ಫುಟ್ ಬಾಲ್ ಸಂಸ್ಥೆ ಬ್ಲೇಜರ್ ಅವರ ವಿರುದ್ಧ ನಿಷೇಧದ ಶಿಕ್ಷೆ ವಿಧಿಸಿದೆ. 2013ರಲ್ಲಿ ಲಂಚ, ಹಣಕಾಸು ಅವ್ಯವಹಾರದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಫಿಫಾ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸಿಎನ್ಎನ್ ತಿಳಿಸಿದೆ.