ಸುನೀಲ್ ಚೆಟ್ರಿ 
ಕ್ರೀಡೆ

ಐಎಸ್‌ಎಲ್ ಹರಾಜು: 1.20 ಕೋಟಿಗೆ ಸುನಿಲ್ ಚೆಟ್ರಿ ಹರಾಜು

ಭಾರತೀಯ ಸೂಪರ್ ಲೀಗ್(ಐಎಸ್‌ಎಲ್) ಹರಾಜಿನಲ್ಲಿ ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಯನ್ನು 1.20 ಕೋಟಿ ರುಪಾಯಿಗೆ...

ನವದೆಹಲಿ: ಭಾರತೀಯ ಸೂಪರ್ ಲೀಗ್(ಐಎಸ್‌ಎಲ್) ಹರಾಜಿನಲ್ಲಿ ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಯನ್ನು 1.20 ಕೋಟಿ ರುಪಾಯಿಗೆ ಮುಂಬೈ ಸಿಟಿ ಎಫ್‌ಸಿ ತಂಡ ಖರೀದಿಸಿದೆ.

ಶುಕ್ರವಾರ ನಡೆದ ಹರಾಜಿನಲ್ಲಿ ಸುನೀಲ್ ಚೆಟ್ರಿ 1.20 ಕೋಟಿ ರುಪಾಯಿಗೆ ಹರಾಜಾಗಿದ್ದು, ಅವರ ಮೂಲ ಬೆಲೆ 80 ಲಕ್ಷ ರು. ಹೊಂದಿದ್ದರು. ಮೂಲ ಬೆಲೆ 27 ಲಕ್ಷ ರು. ಹೊಂದಿದ್ದ ಸೆಂಟ್ರಲ್‌ ಮಿಡ್‌ಪೀಲ್ಡರ್‌ ಯೂಗೆನ್ಸನ್‌ ಲಿಂಗ್ಡೊ 1.05 ಕೋಟಿ ರು.ಗೆ ಬಿಕರಿಯಾಗಿ ಅಚ್ಚರಿ ಮೂಡಿಸಿದ್ದು, ಪುಣೆ ಎಫ್‌ಸಿ ಖರೀದಿಸಿತ್ತು.

ಇದೇ ಐಎಸ್‌ಎಲ್‌ನ ಅತಿ ದೊಡ್ಡ ಮೊತ್ತ ಎಂಬ ಭಾವನೆ ಆರಂಭದಲ್ಲಿ ಎಲ್ಲರಲ್ಲಿತ್ತು. ಆದರೆ ಸುನಿಲ್‌ ಚೆಟ್ರಿ ಅವರಿಗೆ ನಿರೀಕ್ಷೆಯಂತೆ ಅತ್ಯಧಿಕ ಬೇಡಿಕೆ ಕುದುರಿ 1.20 ಕೋಟಿ ರೂ.ಗೆ ಅವರು ಮುಂಬೈ ತಂಡದ ಪಾಲಾದರು. ಬಿಡ್‌ನಲ್ಲಿ ಮೂರನೇ ಅಧಿಕ ಮೊತ್ತಕ್ಕೆ ಮಾರಾಟವಾಗಿದ್ದು ಭಾರತ ತಂಡದ ಡಿಫೆಂಡರ್‌ ರಿನೊ ಅಂಟೊ. ಅವರನ್ನು ಹಾಲಿ ಐಎಸ್‌ಎಲ್‌ ಚಾಂಪಿಯನ್‌ ಅಟ್ಲೆಟಿಕೊ ಡಿ ಕೋಲ್ಕತಾ ತಂಡ 90 ಲಕ್ಷ ರೂ. ನೀಡಿ ಖರೀದಿಸಿತು. ಅವರ ಮೂಲ ಬೆಲೆ ಕೇವಲ 17 ಲಕ್ಷ ರೂ. ಆಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!

ಜುಲೈ ಕಂಟಕ: ಕಳೆದ ವರ್ಷ ಹಠಾತ್ ಬಿರುಗಾಳಿಯಿಂದ ದೋಣಿ ಮಗುಚಿ 39 ಮಂದಿ ಸಾವು; ಈ ವರ್ಷ 15 ಮಂದಿ ದುರ್ಮರಣ!