ಚೆನ್ನೈ ಸೂಪರ್ ಕಿಂಗ್ಸ್ ತಂಡ ( ಸಂಗ್ರಹ ಚಿತ್ರ) 
ಕ್ರೀಡೆ

ಐಪಿಎಲ್ ಫಿಕ್ಸಿಂಗ್ 14ರಂದು ತೀರ್ಪು

2013ರಲ್ಲಿ ನಡೆದಿದ್ದ ಐಪಿಎಲ್ 6 ನೇ ಆವೃತ್ತಿಯಲ್ಲಿ ಗಂಡಾಗುಂಡಿ ಮಾಡಿ ಗಡಿಗೆ ತುಪ್ಪ ತಿಂದಿದ್ದ ಆರೋಪಿಗಳಿಗೆ ನೀರು ಕುಡಿಯುವ ಕಾಲ ಸನ್ನಿಹಿತವಾಗಿದೆ...

ನವದೆಹಲಿ: 2013ರಲ್ಲಿ ನಡೆದಿದ್ದ ಐಪಿಎಲ್  6 ನೇ ಆವೃತ್ತಿಯಲ್ಲಿ ಗಂಡಾಗುಂಡಿ ಮಾಡಿ  ಗಡಿಗೆ ತುಪ್ಪ ತಿಂದಿದ್ದ ಆರೋಪಿಗಳಿಗೆ ನೀರು ಕುಡಿಯುವ ಕಾಲ ಸನ್ನಿಹಿತವಾಗಿದೆ. ದಂಧೆ ಮೂಲಕ ದೇಶದ ಕೋಟ್ಯಾನುಕೋಟಿ ಕ್ರಿಕೆಟ್ ಅಭಿಮಾನಿಗಳಿಗ ನಂಬಿಕೆಗೆ ದ್ರೋಹವೆಸಗಿದ್ದ ವ್ಯಕ್ತಿಗಳ ವಿರುದ್ಧ ಬುಧವಾರ ಅಂತಿಮ ತೀರ್ಪು ಹೊರಬೀಳಲಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ
 ಆರ್.ಎಂ. ಲೋಧಾ ನೇತೃತ್ವದ ಸಮಿತಿ , ಆರೋಪಿಗಳಇಗೆ ಬುಧವಾರ ಶಿಕ್ಷೆಯ ಪ್ರಮಾಣವನ್ನು ವಿಧಿಸಲಿದ್ದು. ಇದು ಭಾರತೀಯ ಕ್ರಿಕೆಟ್  ರಂಗದ  ಮೇಲೆ ದೊಡ್ಡಮಟ್ಟದ ಪರಿಣಾಮ ಉಂಟುಮಾಡಲಿದೆ ಎಂದು ನಿರೀಕ್ಷಿಸ ಲಾಗಿದೆ. ಲೋಧಾ ನೇತೃತ್ವದ ಸಮಿತಿ ನೀಡಲಿರುವ ಈ ತೀರ್ಪು, ಹಗರಣದಲ್ಲಿ ಆರೋಪಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿ ಕಾರಿ ಹಾಗೂ ಐಸಿಸಿ ಮುಖ್ಯಸ್ಥ  ಎನ್. ಶ್ರೀನಿವಾಸನ್¸ ಅವರ
ಅಳಿಯ ಗುರುನಾಥ್ ಮೇಯಪ್ಪನ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಸಹ ಮಾಲೀಕ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರ ಪತಿ ರಾಜ್ ಕುಂದ್ರಾ
ಅವರ ಹಣೆಬರಹ ಸಹ ಬುಧವಾರ ನಿರ್ಧಾರವಾಗಲಿದೆ. ಸುಮಾರು 18   ತಿಂಗಳ ಕಾಲ ಸುದೀಘ ವಿಚಾರಣೆಯ ನಂತರ, ಇದೇ ವರ್ಷದ ಜನವರಿ 22 ರಂದು ಐಪಿಲ್ ಫಿಕ್ಸಿಂಗ್ ಬಗ್ಗೆ  ತನ್ನ ತೀರ್ಪು ಪ್ರಕಟಿಸಿದ್ದು ಸುಪ್ರೀಮ್  ಕೋರ್ಟ್  ಗುರುನಾಥ್ ಮೇಯಪ್ಪನ್   ಹಾಗೂ ಗಾಜ್ ಕುಂದ್ರಾ ಸೇರಿದಂತೆ ಹಲವರನ್ನು  ತಪ್ಪಿತಸ್ಥರೆಂದು ಘೋಷಿಸಿತ್ತು.


ಹೆಚ್ಚುವರಿ ಜವಾಬ್ದಾರಿಯ ವರದಿ ಸದ್ಯಕ್ಕಿಲ್ಲ

ಬಿಸಿಸಿಐನಲ್ಲಿ ಪಾರದರ್ಶಕ ಆಡಳಿತದ ಬಗ್ಗೆಯೂ ಸಲಹೆಗಳನ್ನು ನೀಡುವಂತೆ ನ್ಯಾ. ಲೋಧಾ ನೇತೃತ್ವದ ಸಮಿತಿಗೆ ಸರ್ವೋಚ್ಚ ನ್ಯಾಯಾ ಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ, ಬಿಸಿಸಿಐನ ಅನೇಕ ಅಧಿಕಾರಿಗಳ ವಿಚಾರಣೆ ನಡೆಸಿದ್ದ ಸಮಿತಿ, ಈ ಬಗ್ಗೆ ಎಲ್ಲಾ ಮಾಹಿತಿಯನ್ನು ಕಲೆಹಾಕಿದೆ. ವಿಶೇಷವೆಂದರೆ, ಬಿಸಿಸಿಐನ ಹಾಲಿ ಅಧ್ಯಕ್ಷ  ಜಗಮೋಹನ್ ದಾಲ್ಮಿಯಾ ಅವರನ್ನೂ ಸಮಿತಿ ವಿಚಾರಣೆ ನಡೆಸಿದೆ. ಮೂಲಗಳ ಪ್ರಕಾರ, ದಾಲ್ಮಿಯಾ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಅನರ್ಹರೆಂದು ಸಮಿತಿಯು ನಿರ್ಧರಿಸಿದೆ. ಆದರೆ, ಈ ಬಗ್ಗೆ ಶೀಘ್ರದಲ್ಲೇ ತಾನು ಸಲ್ಲಿಸಲಿರುವ ವರದಿಯಲ್ಲಿ ಸ್ಪಷ್ಟವಾಗಿ ಸಮಿತಿ ಉಲ್ಲೇಖಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!