ಕ್ರೀಡೆ

ಜೊಕೊ, ಫೆಡರರ್ ಕದನ ಕೌತುಕ

Sumana Upadhyaya

ವಿಶ್ವ ಟೆನಿಸ್ ರಂಗದ ನಂಬರ್ ಒನ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಹಾಗೂ 2ನೇ ಶ್ರೇಯಾಂಕಿತ, ಸ್ವಿರ್ಜಲೆಂಡ್ ನ ರೋಜರ್ ಫೆಡರರ್ ಭಾನುವಾರ ನಡೆಯಲಿರುವ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಮುಖಾಮುಖಿಯಾಗಲಿದೆ.

ವಿಂಬಲ್ಡನ್ ನೆಲದಲ್ಲಿ ಫೆಡರರ್ ಫೈನಲ್ ಗೆ ಕಾಲಿಡುತ್ತಿರುವುದು ಇದು 10ನೇ ಬಾರಿ. ಹಾಗಾಗಿ, ಅವರು ಜಯ ಗಳಿಸಿದರೆ, ಅದು 8ನೇ ಬಾರಿ ವಿಂಬಲ್ಡನ್ ಗೆದ್ದ ಏಕೈಕ ಟೆನಿಸಿಗ ಎಂಬ ಹೆಗ್ಗಳಿಕೆ ಅವರದ್ದಾಗಲಿದೆ. ಈ ಮೂಲಕ, 1974ರಲ್ಲಿ ಕೆನ್ ರೋಸ್ ವೆಲ್ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ. ಅಲ್ಲದೆ, ಇದು ಫೆಡರರ್ ಅವರ 26ನೇ ಗ್ರಾಂಡ್ ಸ್ಲಾಂ ಟೂರ್ನಿ. ಅಷ್ಟೇ ಅಲ್ಲ, ಇಂದಿನ ಪಂದ್ಯದಲ್ಲಿ ಅವರು ಜಯಗಳಿಸಿ ಪ್ರಶಸ್ತಿ ಗೆದ್ದರೆ, 7 ಬಾರಿ ಇಲ್ಲಿ ಚಾಂಪಿಯನ್ ಆದ ಹೆಗ್ಗಳಿಕೆ ಹೊಂದಿರುವ ಅಮೆರಿಕಾದ ಪೀಟ್ ಸಾಂಪ್ರಾಸ್ ಅವರ ದಾಖಲೆಯನ್ನೂ ಮುರಿಯಲಿದ್ದಾರೆ. ಪರಸ್ಪರ 39 ಬಾರಿ ಹಣಾಹಣಿ ನಡೆಸಿದ್ದಾರೆ.

ಈ ಪೈಕಿ ಫೆಡರರ್ 20 ಬಾರಿ, ಜೊಕೊವಿಚ್ 19 ಬಾರಿ ಗೆಲುವು ಪಡೆದಿದ್ದಾರೆ. ಕಳೆದ ವರ್ಷ ನಡೆದಿದ್ದ ವಿಂಬಲ್ಡನ್ ಫೈನಲ್ ನಲ್ಲೂ ಈ ಇಬ್ಬರೇ ಕಾದಾಡಿದ್ದರು. ಆಗ, ಜೊಕೊವಿಚ್ ಗೆಲುವು ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಅದರ ಬೆನ್ನಲ್ಲೇ ನಡೆದಿದ್ದ ಯುಎಸ್ ಓಪನ್ ಫೈನಲ್ ನಲ್ಲಿ ಜೊಕೊವಿಚ್ ವಿರುದ್ಧ ಫೆಡರರ್ ಚಾಂಪಿಯನ್ ಆಗಿದ್ದರು.

SCROLL FOR NEXT