ಮೀರ್ಪುರ: ವೇಗಿಗಳಾದ ಮುಸ್ತುಫಿಜುರ್ ರೆಹಮಾನ್ ಹಾಗೂ ನಾಸಿರ್ ಹುಸೇನ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ, ಭಾನುವಾರ ನಡೆದ ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‍ಗಳ ಸೋಲು ಅನುಭವಿಸಿದೆ. ಈ ಗೆಲುವಿನೊಂದಿಗೆ,
ಬಾಂಗ್ಲಾದೇಶ ತಂಡ, ಮೂರು ಪಂದ್ಯಗಳ ಈ ಏಕದಿನ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ, 46 ಓವರ್‍ಗಳಲ್ಲಿ ಕೇವಲ 162 ರನ್ ದಾಖಲಿಸಿ ಆಲೌಟ್ ಆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ, 27.4 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿ ಜಯದ ನಗೆ ಬೀರಿತು. ಇಲ್ಲಿನ ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದಿದ್ದ ದಕ್ಷಿಣ ಆಫ್ರಿಕಾ ತಂಡ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆದರೆ, ಹರಿಣಗಳ ಉತ್ಸಾಹವನ್ನು ಭಂಗಗೊಳಿಸಿದ ಬಾಂಗ್ಲಾ ಬೌಲರ್‍ಗಳು ಆಫ್ರಿಕನ್ನರು ತತ್ತರಿಸುವಂತೆ ಮಾಡಿದರು. ಕೇವಲ 100 ರನ್ ದಾಖಲಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡ ಹರಿಣಗಳು, ನಂತರ 62 ರನ್‍ಗೆ ಸರ್ವ ಪತನಗೊಂಡಿತು. ಮುಸ್ತಫಿಜುರ್, ನಾಸಿರ್ ಹುಸೇನ್ ತಲಾ 3 ವಿಕೆಟ್ ಪಡೆದರೆ, ರುಬೆಲ್ 2 ಹಾಗೂ ಮಶ್ರಫೆ ಅವರು 1 ವಿಕೆಟ್ ಗಳಿಸಿದರು.
ಆದರೂ, ಜಯ ಹೊಸ್ತಿಲಲ್ಲಿ ಅರ್ಧಶತಕ ಗಳಿಸಿದ್ದ ಮೊಹ್ಮದುಲ್ಲಾ (50 ರನ್, 64 ಎಸೆತ, 6 ಬೌಂಡರಿ) ಅವರು ವಿಕೆಟ್ ಒಪ್ಪಿಸಿದರು. ನಂತರ ಬಂದ, ಶಕೀಬ್ ಅಲ್ ಹಸನ್ ಜೊತೆಗೂಡಿದ ಸೌಮ್ಯ ಸರ್ಕಾರ್ (ಅಜೇಯ 88 ರನ್, 79ಎಸೆತ, 13 ಬೌಂಡರಿ, 1 ಸಿಕ್ಸರ್) ತಂಡವನ್ನು ಗೆಲವಿನ ದಡ ಮುಟ್ಟಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ 46 ಓವರ್ ಳಲ್ಲಿ 162 (ಡು ಪ್ಲೆಸಿಸ್ 41, ಬೆಹರ್ದಿನ್ 36; ಮುಸ್ತಫಿಜುರ್ 38ಕ್ಕೆ 3): ಬಾಂಗ್ಲಾದೇಶ 27.4 ಓವರ್‍ಗಳಲ್ಲಿ 3 ವಿಕೆಟ್‍ಗೆ 167 (ಸೌಮ್ಯ ರ್ಕಾರ್ ಅಜೇಯ 88, ಮಹ್ಮದುಲ್ಲಾ 50; ಬಾಡಾ 45ಕ್ಕೆ 2).