ವಿಂಬಲ್ಡನ್ ಟೆನಿಸ್ ಟೂರ್ನಮೆಂಟ್ ನೋಡಲೆಂದು ಲಂಡನ್ ಗೆ ಹೋಗಿದ್ದ ಕ್ರಿಕೆಟ್ ದೇವರಿಗೆ ಅಲ್ಲಿನ ಸ್ಥಳಿಯ ಬಸ್ ಮಿಸ್ ಆಗಿ ಟ್ವಿಟರ್ ನಲ್ಲಿ ತಮ್ಮನ್ನು ಹಿಂಬಾಲಿಸುತ್ತಿರುವವರಿಂದ ಲಿಫ್ಟ್ ಕೇಳಿದ ಘಟನೆ ನಡೆದಿದೆ.
ಗ್ರೇಟ್ ಹ್ಯಾಸ್‌ಲೇ ಆಕ್ಸಫರ್ಡ್‌ಶಯರ್ ನಲ್ಲಿದ್ದ ಸಚಿನ್ ತೆಂಡೂಲ್ಕರ್ ಗೆ ಕೊನೆಯ ಬಸ್ ತಪ್ಪಿ ಹೋಯಿತು. ಅಲ್ಲಿಂದ ನಗರಕ್ಕೆ ತಲುಪಲು ಸಚಿನ್‌ಗೆ ಆ ಹೊತ್ತಿನಲ್ಲಿ ಬೇರೆ ಯಾವುದೇ ವಾಹನ ಸೌಕರ್ಯ ಇರಲಿಲ್ಲವಾದ್ದರಿಂದ 'ಕೊನೆಯ ಬಸ್ಸು ತಪ್ಪಿಹೋಗಿದೆ. ಯಾರಾದರೂ ನನಗೆ ಲಿಫ್ಟ್ ಕೊಡಲು ಬರುವಿರಾ" ಎಂದು ಟ್ವಿಟ್ ಮಾಡಿದ್ದಾರೆ.
ಕ್ರಿಕೆಟ್ ದೇವರಿಗೆ ಬಸ್ ತಪ್ಪಿ ಹೋಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಟ್ವಿಟರ್ ನಲ್ಲಿದ್ದ ಸಾವಿರಾರು ಅಭಿಮಾನಿಗಳು ಸಚಿನ್ ಟ್ವಿಟ್ ಗೆ ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಓರ್ವ ಟ್ವಿಟ್ ಮಾಡಿದ್ದು ದೇವರಿಗೂ ಕೆಲವೊಮ್ಮೆ ಬಸ್ ತಪ್ಪಿಹೋಗುವುದುಂಟು ಎಂದು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ನಿಮ್ಮನ್ನು ಬಿಟ್ಟು ಹೋದ ಬಸ್ ಚಾಲಕ ದುರದೃಷ್ಟಶಾಲಿ ಎಂದು ಹೇಳಿದ್ದಾರೆ.
ಬಸ್ ಗಾಗಿ ಕಾಯುತ್ತಿರುವ ಚಿತ್ರವನ್ನು ಸಚಿನ್ ತೆಂಡೂಲ್ಕರ್ ಇನ್ಸ್ಟಾಗ್ರಾಮ್ ನಲ್ಲೂ ಅಪ್ ಡೇಟ್ ಮಾಡಿದ್ದಾರೆ. ತಕ್ಷಣವೇ ಪ್ರತಿಕ್ರಿಯಿಸಿರುವ ಅಭಿಮಾನಿಗಳು ನಿಮಗೆ ಲಿಫ್ಟ್ ಕೊಡುವುದುದೆಂದರೆ ದೇವರಿಗೆ ಲಿಫ್ಟ್ ಕೊಟ್ಟಂತೆ ನಾನು ನಿಮಗೆ ಲಿಫ್ಟ್ ಕೊಡುತ್ತೇನೆ ಎಂದು ಹೇಳಿದ್ದಾರೆ. ಒಂದು ತಾಸಿನೊಳಗೆ ನಾನಲ್ಲಿಗೆ ಬರುತ್ತೇನೆ ಎಂದು ಮತೊಬ್ಬರು ಟ್ವೀಟ್ ಮಾಡಿದ್ದಾರೆ. ಆದರೆ ಕೇವಲ ಟ್ವೀಟ್ ಗಳ ಬಗ್ಗೆ ಮಾತ್ರ ಮಾಹಿತಿ ಲಭ್ಯವಿದೆಯೇ ಹೊರತು ಬಸ್ ಮಿಸ್ ಮಾಡಿಕೊಂಡ ಸಚಿನ್ ತೆಂಡೂಲ್ಕರ್ ಕೊನೆಗೆ ಹೇಗೆ ತಲುಪಿದರು ಎಂದು ತಿಳಿದುಬಂದಿಲ್ಲ.