ಸೌರವ್ ಘೋಶಾಲ್ ಮತ್ತು ಜೋಷ್ನಾ ಚಿನ್ನಪ್ಪ 
ಕ್ರೀಡೆ

ಸ್ಕ್ವಾಷ್: ಸೌರವ್ ಘೋಶಾಲ್, ಜೋಷ್ನಾ ಚಿನ್ನಪ್ಪ ಚಾಂಪಿಯನ್

ಹಾಲಿ ಚಾಂಪಿಯನ್ ಹರಿಂದರ್ ಪಾಲ್ ಸಂಧು ಗೆಲವಿನ ಸಮೀಪಕ್ಕೆ ಬಂದಿದ್ದರು ಪ್ರಶಸ್ತಿ ಉಳಿಸಿಕೊಳ್ಳಲುವಲ್ಲಿ ವಿಫಲವಾದ ಪರಿಣಾಮ...

ತಿರುವನಂತಪುರಂ: ಹಾಲಿ ಚಾಂಪಿಯನ್ ಹರಿಂದರ್ ಪಾಲ್ ಸಂಧು ಗೆಲವಿನ ಸಮೀಪಕ್ಕೆ ಬಂದಿದ್ದರು ಪ್ರಶಸ್ತಿ ಉಳಿಸಿಕೊಳ್ಳಲುವಲ್ಲಿ ವಿಫಲವಾದ ಪರಿಣಾಮ ಎಸ್‍ಬಿಟಿ 63ನೇ ಹಿರಿಯರ ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್‍ಶಿಪ್‍ನಲ್ಲಿ ಸೌರವ್ ಘೋಶಾಲ್ ಚಾಂಪಿಯನ್ ಆಗಿದ್ದಾರೆ.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸೌರವ್ ಘೋಶಾಲ್ ತಮ್ಮ ಎದುರಾಳಿ ಹರಿಂದರ್ ವಿರುದ್ಧ 8-11, 4-11, 11-6, 11-7, 11-6 ರೋಚಕ ಗೆಲವು ದಾಖಲಿಸಿದರು. ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಜೋಷ್ನಾ ಚಿನ್ನಪ್ಪ 11-6, 12-10, 11-5 ಅಂತರದಿಂದ ಗೆಲವು ದಾಖಲಿಸಿದರು. ಪಂದ್ಯದ ಆರಂಭಿಕ ಎರಡು ಗೇಮ್ ಗಳಲ್ಲಿ ಸೋಲನುಭವಿಸಿದ್ದ ಸೌರವ್ ಘೋಶಾಲ್ ನಂತರದ ಮೂರು ಸೆಟ್ ಗಳನ್ನು ಗೆದ್ದುಕೊಳ್ಳುವ ಮೂಲಕ ಅದ್ಭುತ ಆಟ ಪ್ರದರ್ಶಿಸಿದರು. ಆರಂಭಿಕ ಎರಡು ಗೇಮ್ ಗಳನ್ನು ಗೆದ್ದ ನಂತರ ಹರಿಂದರ್ ತಮ್ಮ ಪ್ರಶಸ್ತಿ ಉಳಿಸಿಕೊಳ್ಳುವ ನಿರೀಕ್ಷೆ ಇತ್ತು. ಆದರೆ ಘೋಶಾಲ್ ಅವರ ಹೋರಾಟಕಾರಿ ಪ್ರದರ್ಶನ ಪ್ರಶಸ್ತಿ ಗೆಲ್ಲುವಂತೆ ಮಾಡಿತು.

ಇನ್ನುಮಹಿಳೆಯರ ವಿಭಾಗದಲ್ಲಿ ಜೋಷ್ನಾ ಎಂದಿನಂತೆ ತಮ್ಮ ಉತ್ತಮ ಫಾರ್ಮ್ ಮುಂದುವರಸಿದ್ದು, ಹರ್ಷಿತ್ ಕೌರ್ ಜವಾಂಡ ವಿರುದ್ಧ ಜಯಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

SCROLL FOR NEXT