ಸುಮಿತ್ ನಗಾಲ್ 
ಕ್ರೀಡೆ

ವಿಂಬಲ್ಡನ್‍ ಬಾಲಕರ ಡಬಲ್ಸ್: ಭಾರತದ ಸುಮಿತ್ ನಗಾಲ್ ಪ್ರಶಸ್ತಿ ಗರಿ

ಬಾಲಕರ ಡಬಲ್ಸ್ ವಿಭಾಗದಲ್ಲಿ ಭಾರತದ ಸುಮಿತ್ ನಗಾಲ್ ದಾಖಲೆ ಪುಟ ಸೇರಿದ್ದಾರೆ. ವಿಂಬಲ್ಡನ್‍ನ ಬಾಲಕರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಗ್ರಾಂಡ್ ಸ್ಲಾಂ ಟೆನಿಸ್...

ಬಾಲಕರ ಡಬಲ್ಸ್ ವಿಭಾಗದಲ್ಲಿ ಭಾರತದ ಸುಮಿತ್ ನಗಾಲ್ ಸಾಧನೆ ಮೆರೆದಿದ್ದಾರೆ. ವಿಂಬಲ್ಡನ್‍ನ ಬಾಲಕರ ಡಬಲ್ಸ್ ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಗ್ರಾಂಡ್ ಸ್ಲಾಂ ಟೆನಿಸ್
ಟೂರ್ನಿಯ ಕಿರಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ 6ನೇ ಭಾರತೀಯ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 17 ವರ್ಷದ ದೆಹಲಿಯ ಸುಮಿತ್ ತಮ್ಮ ಜತೆಗಾರ ವಿಯೆಟ್ನಾಂನ ನಮ್ ಹೊಂಗ್ ಲೀ ಜತೆಗೂಡಿ, ತಮ್ಮ ಪ್ರತಿಸ್ಪರ್ಧಿ ಅಮೆರಿಕದ ರಿಲೀ ಒಪೆಲ್ಕಾ ಮತ್ತು ಜಪಾನ್ ನ ಸ್ಯಾಂಟಿಲಾನ್ ವಿರುದ್ಧ 7-6 (7-4), 6-4 ಸೆಟ್‍ಗಳ ಅಂತರದಲ್ಲಿ ಜಯಿಸಿ ಪ್ರಶಸ್ತಿ ಗೆದ್ದರು. 1 ಗಂಟೆ 3 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸುಮಿತ್ ಜೋಡಿ ಸಂಪೂರ್ಣ ಪ್ರಬಲ್ಯ ಮೆರೆಯಿತು.
ಆರಂಭಿಕ ಸೆಟ್‍ನಲ್ಲಿ ಎದುರಾಳಿ ಜೋಡಿಯಿಂದ ಪ್ರತಿರೋಧ ಎದುರಿಸಿತಾದರೂ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಇನ್ನು ಎರಡನೇ ಸೆಟ್ ನಲ್ಲಿ ಸುಲಭವಾಗಿ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ಭಾರತ ಈ ಟೂರ್ನಿಯಲ್ಲಿ 3 ಪ್ರಶಸ್ತಿ ಪಡೆಯಿತು. 
ಈ ಹಿಂದೆ ಗೆದ್ದವರು: ಕಳೆದ ಬಾರಿ ಭಾರತದ ಪರ ಗ್ರಾಂಡ್ ಸ್ಲಾಂ ಕಿರಿಯರ ವಿಭಾಗದಲ್ಲಿ ಯುಕಿ ಭಾಂಬ್ರಿ ಪ್ರಶಸ್ತಿ ಗೆದ್ದಿದ್ದರು. ಯುಕಿ 2009ರಲ್ಲಿ ಆಸ್ಟ್ರೇಲಿಯಾ ಓಪನ್ ಬಾಲಕರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಉಳಿದಂತೆ ರಾಮನಾಥ್ ಕೃಷ್ಣನ್(ವಿಂಬಲ್ಡನ್, 1954), ರಮೇಶ್ ಕೃಷ್ಣನ್(ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ 1979), ಲಿಯಾಂಡರ್ ಪೇಸ್(ವಿಂಬಲ್ಡನ್ 1990, ಯುಎಸ್ ಓಪನ್ 1991) ಬಾಲಕರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು. ಸಾನಿಯಾ ಮಿರ್ಜಾ 2003ರ ವಿಂಬಲ್ಡನ್‍ನ ಬಾಲಕಿಯರ ಡಬಲ್ಸ್ ವಿಭಾಗದಲ್ಲಿ ರಷ್ಯಾದ ಜತೆಗಾರ್ತಿ ಅಲಿಸಾ ಕ್ಲೆಬೆನೊವಾ ಜತೆಗೂಡಿ ಪ್ರಶಸ್ತಿ ಪಡೆದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!