ಕ್ರೀಡೆ

ಬ್ಯಾಡ್ಮಿಂಟನ್: ಸಿಂಧು ಶ್ರೀಕಾಂತ್ ಎರಡನೇ ಸುತ್ತಿಗೆ

Mainashree

ತೈಪೆ: ಭಾರತದ ಅಗ್ರ ಶ್ರೇಯಾಂಕಿತ ಬ್ಯಾಡ್ಮಿಂಟನ್ ಆಟಗಾರರಾದ ಪಿ.ವಿ. ಸಿಂದು, ಕೆ. ಶ್ರೀಕಾಂತ್ ಹಾಗೂ ಉದಯೋನ್ಮುಖ ಆಟಗಾರ ಸಮೀರ್ ವರ್ಮಾ ಚೈನೀಸ್ ತೈಪೆ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಎರಡನೇ ಸುತ್ತು ತಲುಪಿದ್ದಾರೆ.

200,000 ಡಾಲರ್ ಮೊತ್ತದ ಟೂರ್ನಿಯ ಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ವಿಶ್ವದ 14ನೇ ಶ್ರೇಯಾಂಕಿತೆ ಪಿ.ವಿ. ಸಿಂಧು ಇಂಡೋನೇಷ್ಯಾದ ಲಿಂಡಾವೆನಿ ಫೆನೆಟ್ರಿ ವಿರುದ್ಧ 21-19, 21-19ರ ಎರಡು ನೇರ ಹಾಗೂ ಕಠಿಣಕಾರಿ ಗೇಮïಗಳಲ್ಲಿ ಜಯಿಸಿ ಇದೀಗ ಮೂರನೇ ಶ್ರೇಯಾಂಕಿತೆ ಹಾಗೂ ಸ್ಥಳೀಯ ಆಟಗಾರ್ತಿ ತಾಯ್ ಟ್ಸು ಯಿಂಗ್ ವಿರುದ್ಧ ಸೆಣಸಲು ಅರ್ಹತೆ ಪಡೆದರು.
ಇನ್ನು ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ಕೆ. ಶ್ರೀಕಾಂತ್ ಚೈನೀಸ್ ತೈಪೆಯ ಟ್ಸು ವೀ ವಾಂಗ್ ವಿರುದ್ಧ 21-17, 21-15ರಿಂದ ಮಣಿಸಿ ದ್ವಿತೀಯ ಸುತ್ತಿಗೆ ಸಾಗಿದರು. ಇದೀಗ ಮುಂದಿನ ಸುತ್ತಿನಲ್ಲಿ ಇಂಡೋನೇಷಿಯಾದ ಇಹ್ಸಾನ್ ಮೌಲಾನ ಮುಸ್ತಾಫ್ ವಿರುದ್ಧ ಶ್ರೀಕಾಂತ್ ಸೆಣಸಲಿದ್ದಾರೆ. ಇತ್ತ ಯುವ ಆಟಗಾರ ಸಮೀರ್ ಸ್ಥಳೀಯ ಆಟಗಾರ ಕುವೊ ಪೊ ಚೆಂಗ್ ವಿರುದ್ಧ ಕಠಿಣ ಹೋರಾಟ ನಡೆಸಿ 20-22, 13-21, 21-13ರಿಂದ ಗೆಲುವು ಸಾಧಿಸಿದರು.

ಮುಂದಿನ ಹಂತದಲ್ಲಿ ಅವರು ವಿಶ್ವ ನಂ.1 ಹಾಗೂ ಚೀನಾದ ಚೆನ್ ಲಾಂಗ್ ವಿರುದ್ಧ ಸೆಣಸಲಿದ್ದಾರೆ. ಈ ಮಧ್ಯೆ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದಿದ್ದ ಆರ್‍ಎಂವಿ ಗುರುಸಾಯಿದತ್ ಹೋರಾಟಕ್ಕೆ ತೆರೆಬಿದ್ದಿದೆ.ಇಂಡೋನೇಷ್ಯಾದ ಹಿರೆನ್ ರುಸ್ಟಾವಿಟೋ ವಿರುದಟಛಿ ಅವರು 21-23, 17-21ರಿಂದ ಸೋಲನುಭವಿಸಿದರು.

SCROLL FOR NEXT