ಕ್ರೀಡೆ

ಜಗಮೋಹನ್ ದಾಲ್ಮಿಯಾಗೆ ಕೋಕ್ : ಬಿಸಿಸಿಐಗೆ ಹೊಸ ಅಧ್ಯಕ್ಷರ ನೇಮಕ?

Srinivas Rao BV

ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್ ಹಗರಣದ ಬಗ್ಗೆ ನ್ಯಾ.ಲೋಧಾ ಸಮಿತಿ ತೀರ್ಪು ಪ್ರಕಟಿಸಿದ ಒಂದೆರಡು ದಿನಗಳಲ್ಲೇ ಬಿಸಿಸಿಐ ಅಧ್ಯಕ್ಷರು ಬದಲಾವಣೆಯಾಗುವ ಬಗ್ಗೆ ಸುಳಿವು ದೊರೆತಿದೆ.

ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಬಿಸಿಸಿಐ ನ ವಾರ್ಷಿಕ ಸಾಮಾನ್ಯ ಸಭೆಯ ನಂತರ ಭಾರತೀಯ ಕ್ರಿಕೆಟ್ ಮಂಡಳಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯುವ ಸಾಧ್ಯತೆ ಇದೆ. ಹಾಲಿ ಅಧ್ಯಕ್ಷ  ಜಗಮೋಹನ್‌ ದಾಲ್ಮಿಯಾ ಅವರ ಆರೋಗ್ಯ ಉತ್ತಮವಾಗಿಲ್ಲದ ಕಾರಣ ಬಿಸಿಸಿಐ ಗೆ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ.

ಐಪಿಎಲ್ ಹಗರಣದ ತೀರ್ಪು ಪ್ರಕಟಿಸಿರುವ ನ್ಯಾ. ಲೋಧಾ ಸಮಿತಿ ಸಹ ಅಧ್ಯಕ್ಷ ಸ್ಥಾನದಲ್ಲಿ 75 ವರ್ಷದ ಜಗಮೋಹನ್ ದಾಲ್ಮಿಯಾ ಮುಂದುವರೆಯುವುದು ಸೂಕ್ತ ಅಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.  ಜಗಮೋಹನ್ ದಾಲ್ಮಿಯಾ ಬಿಸಿಸಿಐ ಅಧ್ಯಕ್ಷರಾಗಿದ್ದರೂ ಕಾರ್ಯದರ್ಶಿ ಅಗುರಾಗ್ ಠಾಕೂರ್ ತಾಂತ್ರಿಕವಾಗಿ ಅಧ್ಯಕ್ಷ ಸ್ಥಾವನ್ನೂ ನಿಭಾಯಿಸುತ್ತಿದ್ದಾರೆ. ಮುಂದಿನ ವರ್ಷದಿಂದ ಬಿಸಿಸಿಐ ಐಸಿಸಿ ಟಿ 20  ವಿಶ್ವಕಪ್ ಆಯೋಜನೆ ಮಾಡುತ್ತಿದ್ದು  ಅಷ್ಟರೊಳಗೆ ಹೊಸ ಅಧ್ಯಕ್ಷರ ನೇಮಕ ನಡೆಯಲಿದೆ.

ಜಗಮೋಹನ್ ದಾಲ್ಮಿಯಾ ಅವರು ತಾವಾಗಿಯೇ ರಾಜೀನಾಮೆ ನೀಡುವಂತೆ ಸೂಚಿಸಬೇಕೆಂದು ಅರುಣ್ ಜೇಟ್ಲಿಗೆ ಬಿಸಿಸಿಐ ನ ಸದಸ್ಯರು ಮನವಿ ಮಾಡಲಿದ್ದಾರೆ ಎಂದೂ ಹೇಳಲಾಗಿದೆ. ಮಾರ್ಚ್ ನಲ್ಲಿ ಜಗಮೋಹನ್ ದಾಲ್ಮಿಯ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದರು. 

SCROLL FOR NEXT