ಸತ್ನಾಮ್ ಸಿಂಗ್ 
ಕ್ರೀಡೆ

ಕೊನೆಗೂ ಗೆದ್ದ ಸತ್ನಾಮ್ ತಂಡ

ಎನ್‍ಬಿಎ ಸಮ್ಮರ್ ಲೀಗ್ ಬ್ಯಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಭಾರತದ ಆಟಗಾರ ಸತ್ನಾಮ್ ಸಿಂಗ್ ಅವರ ತಂಡ ಡಲ್ಲಾಸ್ ಮೇವರಿಕ್ ಜಯದ ಸವಿಯುಂಡಿದೆ...

ಲಾಸ್ ವೆಗಾಸ್: ಇಲ್ಲಿ ನಡೆಯುತ್ತಿರುವ ಎನ್‍ಬಿಎ ಸಮ್ಮರ್ ಲೀಗ್ ಬ್ಯಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಭಾರತದ ಆಟಗಾರ ಸತ್ನಾಮ್ ಸಿಂಗ್ ಅವರ ತಂಡ ಡಲ್ಲಾಸ್ ಮೇವರಿಕ್ ಜಯದ ಸವಿಯುಂಡಿದೆ.

ಲಾಸ್ ಏಂಜಲೀಸ್ ಲ್ಯಾಕರ್ಸ್ ವಿರುದ್ಧ ಸೆಣಿಸಿದ ಅದು 88-86 ಅಂತರದ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಆಡಿದ ಸತ್ನಾಮ್ ಸಿಂಗ್ ಕೇವಲ ನಾಲ್ಕು ನಿಮಿಷಗಳ ಕಾಲ ಆಡಿ,
ಒಂದು ಅಂಕ ಸಂಪಾದಿಸಿಕೊಡುವ ಮೂಲಕ ತಮ್ಮದೊಂದು ಕಾಣಿಕೆ ಸಲ್ಲಿಸಿದರು.

ಪಂದ್ಯದ ಮೊದಲ ಕ್ವಾರ್ಟರ್ ಅವಧಿಯ ಅಂತ್ಯದ ವೇಳೆಗೆ ಅಂಕಣಕ್ಕೆ ಕಾಲಿಡುವ ಅವಕಾಶ ಪಡೆದ ಸತ್ನಾಮ್, ಉತ್ತಮ ಆಟ ಪ್ರದರ್ಶಿಸಿದರು. ಎರಡನೇ ಕ್ವಾರ್ಟರ್ ಶುರುವಾದ ನಂತರ 2 ನಿಮಿಷಗಳ ಕಾಲ ಅವರು ಅಂಕಣದಲ್ಲಿದ್ದರು. ಈ ಅವಧಿಯಲ್ಲಿ ಒಂದು ಫ್ರೀ ತ್ರೋ ಮೂಲಕ ತಮ್ಮ ತಂಡಕ್ಕೆ 1 ಅಂಕ ತಂದುಕೊಟ್ಟರು. ಟೂರ್ನಿಯಲ್ಲಿ, ಈ ಹಿಂದೆ ಆಡಿದ್ದ ಎರಡೂ ಪಂದ್ಯಗಳಲ್ಲಿ ಆಡಿದ್ದ ಸತ್ನಾಮ್ ತಲಾ 4 ಅಂಕಗಳನ್ನು ಗಳಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಕಾವೇರಿ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ ಆರಂಭ, ಡಿಕೆಶಿ ಎದುರೇ ‘5 ವರ್ಷ ಸಿದ್ದರಾಮಯ್ಯ ಸಿಎಂ’ ಘೋಷಣೆ ಕೂಗಿದ ಅಭಿಮಾನಿಗಳು..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿದ್ದು ನಿರ್ಗಮನದ ಬಳಿಕ ಅಸಮಾಧಾನ ತಣಿಸಲು ಕಾಂಗ್ರೆಸ್ ಮಾಸ್ಟರ್‌ಪ್ಲ್ಯಾನ್: 4 DCM ಹುದ್ದೆ ಸೃಷ್ಟಿಗೆ ಚಿಂತನೆ, ಜಮೀರ್, ಪ್ರಿಯಾಂಕ್ ಖರ್ಗೆ, ಎಂಬಿ ಪಾಟೀಲ್ ಹೆಸರು ಫೈನಲ್?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮತ್ತೊಂದು ಪವರ್ ಶಿಫ್ಟ್: ಅಹಿಂದ ಸಮೀಕರಣಕ್ಕೆ ಮಾಸ್ಟರ್‌ಪ್ಲ್ಯಾನ್, ಸತೀಶ್‌ ಜಾರಕಿಹೊಳಿಗೆ KPCC ಜವಾಬ್ದಾರಿ?

SCROLL FOR NEXT