ಟೀಂ ಇಂಡಿಯಾ(ಸಂಗ್ರಹ ಚಿತ್ರ) 
ಕ್ರೀಡೆ

2ನೇ ಸ್ಥಾನದಲ್ಲಿ ಟೀಂ ಇಂಡಿಯಾ

ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್‍ಸ್ವೀಪ್ ಮಾಡಿಕೊಂಡ ಟೀಂ ಇಂಡಿಯಾ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ...

ದುಬೈ: ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್‍ಸ್ವೀಪ್ ಮಾಡಿಕೊಂಡ ಟೀಂ ಇಂಡಿಯಾ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಗುರುವಾರ ಬಿಡುಗಡೆಯಾದ ನೂತನ ಪಟ್ಟಿಯಲ್ಲಿ ಭಾರತ ತಂಡ 115 ಅಂಕಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಆ ಮೂಲಕ 129 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ನಡುವೆ ಅಗ್ರಸ್ಥಾನಕ್ಕೆ 14 ಅಂಕಗಳ ಅಂತರವಿದೆ. ಇನ್ನು ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿ ಸೋತಿದ್ದ ನ್ಯೂಜಿಲೆಂಡ್ ತಂಡ 112 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿ ಮುಂದುವರೆದಿದೆ.

ಉಳಿದಂತೆ 109 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ ತಂಡ ಹಾಗೂ 105 ಅಂಕಗಳೊಂದಿಗೆ ಶ್ರೀಲಂಕಾ ಕ್ರಮ-ವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಜಯಿಸಿ ಸಾಧನೆ ಮಾಡಿರುವ ಬಾಂಗ್ಲಾದೇಶ 96 ಅಂಕಗಳೊಂದಿಗೆ ಏಳನೇ ಸ್ಥಾನವನ್ನು ಖಚಿತಪಡಿಸಿ ಕೊಂಡಿದೆ. ಈ ಮೂಲಕ 98 ಅಂಕ ಹೊಂದಿರುವ ಇಂಗ್ಲೆಂಡ್ ಜತೆಗೆ ಆರನೇ ಸ್ಥಾನಕ್ಕೆ ಕೇವಲ 2 ಅಂಕಗಳ ವ್ಯತ್ಯಾಸವಿದೆ.

ಏಕದಿನ ಬ್ಯಾಟ್ ಮನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸುರೇಶ್ ರೈನಾ ಮಾತ್ರ 1 ಸ್ಥಾನ ಏರಿಕೆ ಕಂಡು 19ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಕೊಹ್ಲಿ (4ನೇ), ಧವನ್ (7ನೇ) ಹಾಗೂ ಧೋನಿ (9ನೇ) ಅಗ್ರ ಹತ್ತರಲ್ಲಿದ್ದು, ಅವರ ಸ್ಥಾನದಲ್ಲೇನೂ ಪಲ್ಲಟವಾಗಿಲ್ಲ. ದ. ಆಫ್ರಿಕಾದ ಎಬಿ ಡಿವಿಲಿಯರ್ಸ್ ಅಗ್ರಸ್ಥಾನದಲ್ಲಿದ್ದಾರೆ.

ಬೌಲರ್‍ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅಗ್ರಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ನ ಟ್ರೆಂಟ್ ಬೌಲ್ಟ್ ದ್ವಿತೀಯ ಹಾಗೂ ವೆಸ್ಟ್ ಇಂಡೀಸ್‍ನ ಸುನೀಲ್ ನಾರಾಯಣ್
ತೃತೀಯ ಸ್ಥಾನ ಪಡೆದಿದ್ದಾರೆ. ಭಾರತದ ಪರ ಆರ್.ಅಶ್ವಿನ್ ಹಾಗೂ ಭುವನೇಶ್ವರ್ ಕುಮಾರ್ ಕ್ರಮವಾಗಿ 11 ಮತ್ತು 12ನೇ ಸ್ಥಾನದಲ್ಲಿರುವುದು ಉತ್ತಮ ಸಾಧನೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ'.. 'ನಿಮ್ಮನ್ನು ಈರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ'; Kichcha Sudeepಗೆ ಪತ್ರ

'ಆಶ್ರಮಕ್ಕೆ ಬರಲು ಹಣ ಪಡೆದ ಕೊಹ್ಲಿ' ಆರೋಪ: ಉಲ್ಟಾ ಹೊಡೆದ Falahari Maharaj, ಕ್ಷಮೆಯಾಚನೆ! video

26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್; ಮೃಗಾಲಯ ವೀಕ್ಷಣೆಗೆ ಬಂದ ಜೋಡಿ, ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'! Video ವೈರಲ್!