ಸಾಂದರ್ಭಿಕ ಚಿತ್ರ 
ಕ್ರೀಡೆ

ಇಂದಿನಿಂದ ಎಲ್ಲೆಲ್ಲೂ ಲೇ... ಪಂಗಾ ಗುಂಗು!

ದೇಶದಲ್ಲೆಲ್ಲಾ ಮತ್ತೆ ರಂಗು ಪಸರಿಸುತ್ತಿದೆ... ಉದ್ದಗಲಕ್ಕೂ ಆಟಗಾರರ ಏದುಸಿರು ಜೋರಾಗಿದೆ...

ನವದೆಹಲಿ: ದೇಶದಲ್ಲೆಲ್ಲಾ ಮತ್ತೆ ರಂಗು ಪಸರಿಸುತ್ತಿದೆ... ಉದ್ದಗಲಕ್ಕೂ ಆಟಗಾರರ ಏದುಸಿರು ಜೋರಾಗಿದೆ... ಎಲ್ಲೆಲ್ಲೂ ಅದೇ ಗುನುಗುವಿಕೆ... ಕಬಡ್ಡಿ... ಕಬಡ್ಡಿ.... ಕಬಡ್ಡಿ..... ಕಬಡ್ಡಿ.... ಇದರೊಂದಿಗೆ ಸಮ್ಮಿಳಿತವಾಗಿದೆ ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ಹಾಡಿರುವ ಲೇ ಪಂಗಾ... ಹಾಡು!

ಹೌದು. ದೇಸಿ ಕ್ರೀಡೆಗಳ ಸರದಾರ ಕಬಡ್ಡಿ  ತಿಯನ್ನು ವಿಶ್ವದ ಮೂಲೆಮೂಲೆಗಳಿಗೆ ಮುಟ್ಟಿಸಿದ ಪ್ರೊ. ಕಬಡ್ಡಿ 2ನೇ ಆವೃತ್ತಿಗೆ ಶನಿವಾರ ಚಾಲನೆ ದೊರೆಯಲಿದೆ. 2014ರಲ್ಲಿ ನಡೆದ ಮೊದಲ ಆವೃತ್ತಿ ಅದ್ಭುತ ಯಶಸ್ಸು ಗಳಿಸಿತ್ತು.  ಪಂಗಾ ಗುಂಗು!

ಇದೀಗ, ಮತ್ತೊಮ್ಮೆ ಅದೇ ಯಶಸ್ಸು, ಅದೇ ರಂಗು, ಅದೇ ಗುಂಗಿನಲ್ಲಿ ಬರುತ್ತಿದೆ 2015ರ ಆವೃತ್ತಿ. ಕಳೆದ ಬಾರಿಯಂತೆಂಯೇ ಎಂಟು ತಂಡಗಳು ಈ ಬಾರಿಯೂ ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿವೆ. ಮೊದಲ ಆವೃತ್ತಿಯಲ್ಲಿ ಜೈಪುರ್ ಪಿಂಕ್ಪ್ಯಾಂಥರ್ಸ್ ತಂಡ ಚಾಂಪಿಯನ್ ಗಿ ಹೊರಹೊಮ್ಮಿತ್ತು. ಫೈನಲ್ ಪಂದ್ಯದಲ್ಲಿ ಅದು, ಯು ಮುಂಬೈ ತಂಡವನ್ನು 35-24 ಅಂಕಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿ ಬಾಚಿಕೊಂಡಿತ್ತು. ಈ ಬಾರಿ ಯಾರು ಗೆಲ್ಲುತ್ತಾರೆ, ಯಾರು ರನ್ನರ್ ಅಪ್ ಆಗುತ್ತಾರೆ, ಯಾರು ಲೀಗ್ ಹಂತದಲ್ಲೇ ನಿರ್ಗಮಿಸುತ್ತಾರೆ, ಯಾರು ಕನಿಷ್ಟ 3-4ನೇ ಸ್ಥಾನಕ್ಕಾದರೂ ಪೈಪೋಟಿ ಮಾಡಬಹುದು ಎಂಬ ಕುತೂಹಲಗಳನ್ನು ಕೆದಕುತ್ತಾ ಹೋದರೆ ರೋಮಾಂಚನವಾಗುತ್ತದೆ. ಕಬಡ್ಡಿ ಪ್ರಿಯರಿಗಂತೂ ಜು. 18ರಿಂದ ಆ. 19ರವರೆಗೆ ಸುಗ್ಗಿಯೋ ಸುಗ್ಗಿ. ಒಟ್ಟು 37 ದಿನಗಳು ನಡೆಯಲಿರುವ ಈ ಪಂದ್ಯಾವಳಿಯಲ್ಲಿ 60 ಪಂದ್ಯಗಳು ನಡೆಯಲಿವೆ. ಎಂಟು ನಗರಗಳಲ್ಲಿ ಕಬಡ್ಡಿ ರಂಗು ಪಸರಿಸಲಿದೆ

 ಬಿಗ್ ಬಿ ರಾಷ್ಟ್ರಗೀತೆ
ಶನಿವಾರ ಸಂಜೆ ನಡೆಯಲಿರುವ ಪ್ರೊ ಕಬಡ್ಡಿ 2ನೇ ಆವೃತ್ತಿಯ ಉದ್ಘಾಟನ ಸಮಾರಂಭದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ರಾಷ್ಟ್ರಗೀತೆ ಹಾಡಲಿದ್ದಾರೆ. ಇದನ್ನು ಅವರು ತಮ್ಮ ಬ್ಲಾಗ್‍ನಲ್ಲಿ ಹೇಳಿಕೊಂಡಿದ್ದಾರೆ. 72 ವರ್ಷದ ಅಮಿತಾಭ್ ಬಚ್ಚನ್, ಈಗಾಗಲೇ ಪ್ರೊ ಕಬಡ್ಡಿಗಾಗಿ `ಲೇ ಪಂಗಾ' ಎಂಬ ಹಾಡನ್ನು ಹಾಡಿದ್ದು, ಅದೀಗಾಗಲೇ ಮಾಧ್ಯಮಗಳಲ್ಲಿ ಜನಪ್ರಿಯವಾಗಿದೆ. ಇದೀಗ, ಮುಂಬೈನ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ (ಎನ್ ಎಸ್‍ಸಿಐ) ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರೊ ಕಬಡ್ಡಿ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಗೀತೆ ಹಾಡುವ ಮೂಲಕ ಮತ್ತೊಮ್ಮೆ ಮಿಂಚು ಹರಿಸಲಿದ್ದಾರೆ.

  •  60ಪಂದ್ಯಗಳು
  • 37ಟೂರ್ನಿ ನಡೆಯುವ ದಿನಗಳು
  • 86ಮಿಲಿಯನ್ ಜನರಿಂದ ಫೈನಲ್ ವೀಕ್ಷಣೆ
  • 435 ಮಿಲಿಯನ್ ಜನರಿಂದ ಚೊಚ್ಚಲ ಕಬಡ್ಡಿ ಟೂರ್ನಿ ವೀಕ್ಷಣೆ
  • ಪ್ರೊ ಕಬಡ್ಡಿ ಬಹುಮಾನ ಮೊತ್ತ ಚಾಂಪಿಯನ್ ರೂ. 1 ಕೋಟಿ ರನ್ನರ್‍ಅಪ್
  • ರೂ. 50 ಲಕ್ಷ ಮೂರನೇ ಸ್ಥಾನ ರೂ.30 ಲಕ್ಷ
  • ನಾಲ್ಕನೇ ಸ್ಥಾನ ರೂ. 20 ಲಕ್ಷ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

SCROLL FOR NEXT