ಮುಂಬೈ: ರೈಡಿಂಗ್ ಮತ್ತು ಡಿಫೆಂಡಿಂಗ್ ಎರಡೂ ವಿಭಾಗ ಯಶಸ್ವಿಯಾದ ಯು ಮುಂಬೈ ತಂಡ, ಬೆಂಗಳೂರು ಬುಲ್ಸ್ ವಿರುದ್ಧ ಗೆಲುವು ಪಡೆದಿದೆ.
ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಯು ಮುಂಬೈ ತಂಡ 36-23 ಅಂಕಗಳ ಅಂತರದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಜಯಿಸಿತು. ಈ ಮೂಲಕ ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಮುಂಬೈ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಶಬ್ಬೀರ್ ಬಾಪು ಅತ್ಯುತ್ತಮ ರೈಡರ್ ಆಗಿ ಹೊರ ಹೊಮ್ಮಿದರು. 14 ರೈಡ್‍ಗಳ ಪೈಕಿ 7 ಬಾರಿ ಅಂಕ ಪಡೆಯಲು ಯಶಸ್ವಿಯಾದ ಶಬ್ಬೀರ್ ತಂಡಕ್ಕೆ ಒಟ್ಟು 10 ಅಂಕ ತಂದುಕೊಟ್ಟರು.
ಬುಲ್ಸ್ ತಂಡದ ಪ್ರಮುಖ ರೈಡರ್ ಅಜಯ್ ಠಾಕೂರ್ ರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಮುಂಬೈ ಗೆಲುವು ದಾಖಲಿಸಲು ಪ್ರಮುಖ ಕಾರಣವಾಯಿತು. ಇನ್ನು ಮಂಜಿತ್ ಚಿಲ್ಲರ್ ಸೇರಿದಂತೆ ಇತರೆ ರಕ್ಷಣಾತ್ಮಕ ಆಟಗಾರರು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಬುಲ್ಸ್ ತಲೆ ಬಾಗಿತು.