ನವದೆಹಲಿ: ಬಹು ನಿರೀಕ್ಷಿತ ಟಿ-20 ಐಸಿಸಿ ವಿಶ್ವಕಪ್ ವೇಳಾಪಟ್ಟಿ ಮಂಗಳವಾರ ಪ್ರಕಟಗೊಂಡಿದೆ.
2016, ಮಾರ್ಚ್ 11ರಿಂದ ಏಪ್ರಿಲ್ 3ರವರೆಗೆ ಬೆಂಗಳೂರು, ಚೆನ್ನೈ, ಧರಂಸಾಲಾ, ಮೊಹಾಲಿ, ಮುಂಬೈ, ನಾಗ್ಪುರ ಮತ್ತು ದೆಹಲಿಯಲ್ಲಿ ಹಾಗೂ ಅಂತಿಮ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ.
ಈ ಎಂಟು ಕ್ರೀಡಾಂಗಣಗಳು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಗುಣಮಟ್ಟ ಹೊಂದಿವೆ. ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಟ್ವೆಂಟಿ-20 ವಿಶ್ವಕಪ್ ನಡೆಸಲು ಬಿಸಿಸಿಐ ಸಿದ್ಧತೆ ಕೈಗೊಂಡಿದೆ. ಈ ಎಲ್ಲಾ 8 ಕ್ರೀಡಾಂಗಣಗಳಲ್ಲಿ ಈ ಹಿಂದೆ ಹಲವು ಅಂತಾರಾಷ್ಟ್ರೀಯ, ದೇಶೀಯ ಪಂದ್ಯಗಳನ್ನು ನಡೆದಿವೆ. 2016ನೇ ಸಾಲಿನ 20-20 ವಿಶ್ವಕಪ್ ಒಂದು ಮರೆಯಲಾರದ ಅನುಭವವನ್ನು ಸ್ಪರ್ಧಿಗಳಿಗೆ ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ನೀಡಬೇಕೆಂಬುದು ನಮ್ಮ ಆಶಯ ಎಂದು ಹೇಳಿದರು.