ಮಿಲಿಂದ್ಗೆ ಐರನ್ಮ್ಯಾನ್ ಗರಿ
ರಾಷ್ಟ್ರ ಮಟ್ಟದ ಮಾಜಿ ಈಜು ಚಾಂಪಿಯನ್, ಬಾಲಿವುಡ್ ನಟ ಮಿಲಿಂದ್ ಸೊಮನ್ 'ಐರನ್ ಮ್ಯಾನ್ ಗರಿ'ಯನ್ನು ಮುಡಿಗೇರಿಸಿಕೊಂಡಿದ್ದಾರೆ...
ನವದೆಹಲಿ: ರಾಷ್ಟ್ರ ಮಟ್ಟದ ಮಾಜಿ ಈಜು ಚಾಂಪಿಯನ್, ಬಾಲಿವುಡ್ ನಟ ಮಿಲಿಂದ್ ಸೊಮನ್ 'ಐರನ್ ಮ್ಯಾನ್ ಗರಿ'ಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ಜರ್ಮನಿಯ ಜ್ಯೂರಿಚ್ ನಲ್ಲಿ ನಡೆದ ಐರನ್ ಮ್ಯಾನ್ ಟ್ರಯ- ಥ್ಲಾನ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 49 ವರ್ಷದ ಮಿಲಿಂದ್ ಗಮನ ಸೆಳೆದಿದ್ದಾರೆ. ಈ ಸ್ಪರ್ಧೆಯಲ್ಲಿ 7 ಭಾರತೀಯರು ಸೇರಿದಂತೆ ವಿಶ್ವದಾದ್ಯಂತ 2,000 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ ಕೆಲವು ತಿಂಗಳಿನಿಂದ ಮಿಲಿಂದ್ ಈ ಸ್ಪರ್ಧೆಗಾಗಿ ಸಾಕಷ್ಟು ಅಭ್ಯಾಸ ನಡೆಸಿದ್ದರು.
ಈ ಸ್ಪರ್ಧೆಯು 3.8 ಕಿ.ಮೀ ಈಜು, 180.2 ಕಿ.ಮೀ ಸೈಕ್ಲಿಂಗ್ ಮತ್ತು 42.2 ಕಿ.ಮೀ ಓಟವನ್ನು ಒಳಗೊಂಡಿತ್ತು. ಈ ಮೂರೂ ಸ್ಪರ್ಧಾವಳಿಯನ್ನು ಮಿಲಿಂದ್ 15 ಗಂಟೆ, 19 ನಿಮಿಷ ಮತ್ತು 29 ಸೆಕೆಂಡ್ ಗಳಲ್ಲಿ ಪೂರ್ಣಗೊಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.