ನವದೆಹಲಿ: ಭಾರತ ಮೂಲದ ಅಮೆರಿಕನ್ ವೇಟ್‍ಲಿಫ್ಟರ್ ಅಮಿತೋಜ್ ಚಾಬ್ರಾ ಉತ್ತಮ ಪ್ರದರ್ಶನ ನೀಡಿ ಲಾಸ್ ವೇಗಾಸ್‍ನಲ್ಲಿ ನಡೆದ ಅಮೆರಿಕ ಪವರ್ ಲಿಫ್ಟಿಂಗ್ ಸಂಸ್ಥೆಯ ರಾಷ್ಟ್ರೀಯ ಚಾಂಪಿಯನ್‍ಶಿಪ್‍ನ ಕಿರಿಯರ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ನೇವಡ ಮೂಲದ 20 ವರ್ಷದ ಚಾಬ್ರಾ 98 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದು, ಸ್ಪರ್ಧೆಯಲ್ಲಿ ಒಟ್ಟು 628 ಕೆ.ಜಿ ಎತ್ತುವ ಮೂಲಕ ದಾಖಲೆ ಬರೆದರು.
2013ರ ಡಿಸೆಂಬರ್‍ನಲ್ಲಿ ಪವರ್ ಲಿಫ್ಟಿಂಗ್ ಅಭ್ಯಾಸ ಆರಂಭಿಸಿದ ಚಾಬ್ರಾ, 2014ರ ಮೇ ತಿಂಗಳಿನಿಂದ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಇವರ ತಂದೆ ಪಂಜಾಬಿ ಮೂಲದವರಾಗಿದ್ದು, ತಾಯಿ ನೇಪಾಳ ಮೂಲದವರಾಗಿದ್ದಾರೆ.